ಅದಮಾರು ಪರ್ಯಾಯ: ಹೊರೆಕಾಣಿಕೆ ದಾಸ್ತಾನು ಉಗ್ರಾಣಕ್ಕೆ ಈಶಪ್ರಿಯ ಶ್ರೀಗಳಿಂದ ಚಾಲನೆ

ಉಡುಪಿ: ಅದಮಾರು ಪರ್ಯಾಯೋತ್ಸವಕ್ಕೆ ಭಕ್ತಾಧಿಗಳು ನೀಡುವ ಹೊರೆಕಾಣಿಕೆಗಳನ್ನು ಸಂಗ್ರಹಿಸಲು ಶ್ರೀಕೃಷ್ಣಮಠದ ರಾಜಾಂಗಣ ಪಾರ್ಕಿಂಗ್‌ ಪ್ರದೇಶದಲ್ಲಿ ನಿರ್ಮಿಸಿರುವ ಅದಮಾರು ಪರ್ಯಾಯದ ಹೊರೆಕಾಣಿಕೆ ದಾಸ್ತಾನು ‘ಉಗ್ರಾಣ’ಕ್ಕೆ ಭಾವಿ ಪರ್ಯಾಯ ಪೀಠಾಧಿಪತಿಗಳಾದ ಅದಮಾರು ಮಠದ ಕಿರಿಯ ಈಶಪ್ರಿಯ ಸ್ವಾಮೀಜಿ ಗುರುವಾರ ಚಾಲನೆ ನೀಡಿದರು. ಅನಂತರ ಮಾತನಾಡಿದ ಸ್ವಾಮೀಜಿ, ಪರ್ಯಾಯೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಒಳ್ಳೆಯ ದರ್ಶನ ಹಾಗೂ ಪ್ರಸಾದ ಸಿಕ್ಕಿದರೆ, ಅದು ಭಗವಂತನಿಗೆ ತೃಪ್ತಿಗೆ ಕೊಡುತ್ತದೆ. ದೇವರ ಪ್ರಸಾದ ತಯಾರಿಸಲು ದವಸ ಧಾನ್ಯ ಹಾಗೂ ತರಕಾರಿಗಳನ್ನು ಮೊದಲೇ ಸಂಗ್ರಹಿಸುವುದು ಉತ್ತಮ. ಈ ನಿಟ್ಟಿನಲ್ಲಿ […]

ಉಡುಪಿ:ಅದಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ಹೊರೆಕಾಣಿಕೆ ಮೆರವಣಿಗೆ

ಉಡುಪಿ:  ಅದಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ಮಲ್ಪೆ,ಮಣಿಪುರ,ಅದಮಾರು ಮೊದಲಾದ ಗ್ರಾಮಗಳ ಭಕ್ತಾಧಿಗಳು ಹೊರೆಕಾಣಿಕೆಯನ್ನು ಜೋಡುಕಟ್ಟೆಯಿಂದ ಮೆರವಣಿಗೆಯಲ್ಲಿ ಬಂದು ಅರ್ಪಿಸಿದರು.ಈ ಸಂದರ್ಭದಲ್ಲಿ  ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಆಗಮಿಸಿದ ಭಕ್ತಾಧಿಗಳಿಗೆ ಅನುಗ್ರಹ ಸಂದೇಶದೊಂದಿಗೆ ಫಲ ಮಂತ್ರಾಕ್ಷತೆ ನೀಡಿದರು.

ಮಾರಣಕಟ್ಟೆ ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ, ಎಲ್ಲೆಲ್ಲೂ ಜನ ಜಾತ್ರೆಯ ವೈಭವ

ಕುಂದಾಪುರ : ಉಡುಪಿ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕ್ಷೇತ್ರ ಎನ್ನುವ ಹೆಸರನ್ನು ಪಡೆದುಕೊಂಡಿರುವ ತಾಲ್ಲೂಕಿನ ಮಾರಣಕಟ್ಟೆಯ ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಹಾಗೂ ಗುರುವಾರ ನಡೆಯಲಿರುವ ಕೆಂಡ ಮಹೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವಕ್ಕಾಗಿ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಮಕರ ಸಂಕ್ರಾಂತಿಯಂದು ರಾತ್ರಿ ನಡೆಯುವ ಕೆಂಡ ಮಹೋತ್ಸವದಲ್ಲಿ ಜಾತಿ ಬೇಧವಿಲ್ಲದೆ, ಮಹಿಳೆಯರು, ಗಂಡಸರು, ಮಕ್ಕಳೆನ್ನದೆ ಸಾವಿರಾರು ಜನರು ಕೆಂಡದ ರಾಶಿಯನ್ನು ತುಳಿಯುವ ಮೂಲಕ […]

ಉಡುಪಿಯ ಛಾಯಾಗ್ರಾಹಕ ಫೋಕಸ್ ರಾಘು ಅವರಿಗೆ ಅಂತರಾಷ್ಟ್ರೀಯ ಗೌರವ:

ಉಡುಪಿ: ವೃತ್ತಿಪರ ಛಾಯಾಗ್ರಾಹಕ, ಉಡುಪಿಯ ಫೋಕಸ್ ರಾಘು ಅವರಿಗೆ 2019 ರ ವಿಶ್ವ ಫೋಟೊಗ್ರಫಿ ವಲಯದಲ್ಲಿ ಪ್ರಾನ್ಸಿನ ಪ್ರತಿಷ್ಠಿತ ಅಂತರರಾಷ್ಟ್ರೀಯ [Federation Internationale de l’ Art Photographique ಫೋಟೊಗ್ರಫಿ ಸಂಸ್ಥೆಯಿಂದ AFIAP Distinction [Artist Federation Internationale de l’ Art Photographique ] ಗೌರವ ದೊರತಿದೆ. ಕಳೆದ 19 ವರ್ಷಗಳಿಂದ ಹವ್ಯಾಸವಾಗಿ ಪಿಕ್ಟೋರಿಯಲ್, ವನ್ಯಜೀವಿ, ಟ್ರಾವಲ್ ಮತ್ತು ಸ್ಟ್ರೀಟ್ ಛಾಯಾಗ್ರಾಹಣವನ್ನು ಮಾಡುತ್ತಿರುವ ಇವರು  15ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರಶಸ್ತಿಗಳು ಮತ್ತು 50 ಕ್ಕೂ ಹೆಚ್ಚು […]

ಜ. 26 – 30: ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಜಾತ್ರೆ

ಕಾರ್ಕಳ: ಜ.8 ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವ ಜ. 26 ರಿಂದ ಜ. 30ರ ವರೆಗೆ ಜರಗಲಿದೆ. ‘ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಸ್ವರ್ಗದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ’ ಎಂಬ ಘೋಷವಾಕ್ಯದೊಂದಿಗೆ ನಡೆಯುವ ಈ ಉತ್ಸವದಲ್ಲಿ ಒಟ್ಟು 48 ಬಲಿ ಪೂಜೆಗಳು ನಡೆಯಲಿವೆ. ಜ. 26ರ ಸಂಜೆ 6.30ಕ್ಕೆ ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ (ಕೊಂಕಣಿಯಲ್ಲಿ), ಜ. 27ರ ಸಂಜೆ 6 ಗಂಟೆಗೆ ಚಿಕ್ಕಮಗಳೂರಿನ ಧರ್ಮಾಧ್ಯಕ್ಷ ರೈ| […]