ಗಂಗೊಳ್ಳಿ : ಗಂಗೊಳ್ಳಿಯ ಜಮಾತುಲ್ ಮುಸ್ಲಿಮಿನ್ ಕಮಿಟಿ ವತಿಯಿಂದ ಗಂಗೊಳ್ಳಿ ಗ್ರಾಮದಲ್ಲಿ ಸುಮಾರು ೬೦೦ ಮನೆಗಳಿಗೆ ದಿನಬಳಕೆ ಸಾಮಾಗ್ರಿಗಳ ಕಿಟ್ ಒದಗಿಸಲಾಯಿತು.
ಕಮಿಟಿ ಅಧ್ಯಕ್ಷ ಪಿ.ಎಂ.ಹಸೈನಾರ್ ನೇತೃತ್ವದ ತಂಡ ಗಂಗೊಳ್ಳಿ ಗ್ರಾಮದಲ್ಲಿ ಜಾತಿ, ಮತ ಬೇಧವಿಲ್ಲದೆ ಸುಮಾರು ೬೦೦ ಮನೆಗಳಿಗೆ ದಿನ ಬಳಕೆಯ ೧೩ ವಸ್ತುಗಳನ್ನೊಳಗೊಂಡ ಕಿಟ್ನ್ನು ಶುಕ್ರವಾರ ವಿತರಿಸಿದರು. ಕೊರೊನಾ ತಡೆಯುವ ದೃಷ್ಟಿಯಿಂದ ಸರಕಾರ ಲಾಕ್ ಡೌನ್ ಆದೇಶ ಮಾಡಿರುವುದರಿಂದ ಅನೇಕ ಕುಟುಂಬಗಳು ದೈನಂದಿನ ವಸ್ತುಗಳನ್ನು ಕೊಳ್ಳಲಾಗದೆ ಪರದಾಡುತ್ತಿದ್ದಾರೆ. ಹೀಗಾಗಿ ಇಂತಹ ಕುಟುಂಬಗಳನ್ನು ಗುರುತಿಸಿ ಅವರಿಗೆ ೧೫ ದಿನಗಳಿಗೆ ಆಗುವಷ್ಟು ದಿನ ಬಳಕೆಯ ವಸ್ತುಗಳನ್ನು ಯಾವುದೇ ಜಾತಿ ಮತ ಬೇಧವಿಲ್ಲದೆ ನೀಡಲಾಗಿದೆ ಎಂದು ಕಮಿಟಿ ಸದಸ್ಯರು ತಿಳಿಸಿದ್ದಾರೆ.