ಕೊರೊನಾ ಪರೀಕ್ಷೆಗೆ ಒಪ್ಪದಿದ್ದರೆ ಜೈಲು ಶಿಕ್ಷೆ ಗ್ಯಾರಂಟಿ.!

ಬೆಂಗಳೂರು: ರಾಜ್ಯ ಸರ್ಕಾರವು ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದ್ದು, ಕೊರೊನಾ ಟೆಸ್ಟ್ ಗೆ ಹೊಸ ನಿಯಮ ಜಾರಿಗೊಳಿಸಿದೆ.
ಅದರಂತೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಒಪ್ಪದಿದ್ದವರಿಗೆ 50 ಸಾವಿರ ದಂಡ ಹಾಗೂ 6 ತಿಂಗಳಿನಿಂದ ಮೂರು ವರ್ಷದವರಿಗೆ ಜೈಲು ಶಿಕ್ಷೆ ವಿಧಿಸಲು ನಿರ್ಧರಿಸಿದೆ.

ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬರುವವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಬೇಕು. ಇಲ್ಲದಿದ್ದರೆ ಅಂಥವರಿಗೆ ದಂಡ ಹಾಗೂ ಜೈಲು ಶಿಕ್ಷೆ ಫಿಕ್ಸ್ ಆಗಲಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕಠಿಣ ಕ್ರಮವನ್ನು ಕೈಗೊಳ್ಳಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಮಾಸ್ಕ್ ಹಾಕದವರಿಗೆ ದಂಡ
ಬೆಂಗಳೂರು ನಗರದಲ್ಲಿ ಈಗಾಗಲೇ ಮಾಸ್ಕ್ ಹಾಕದೆ ಓಡಾಡುವವರಿಗೆ 1 ಸಾವಿರ ದಂಡ ವಿಧಿಸಲು ಬಿಬಿಎಂಪಿ ಆದೇಶಿಸಿದೆ. ಅದರಂತೆ ಮಾರ್ಷಲ್‌ ಗಳನ್ನು ನೇಮಿಸಿ ದಂಡ ವಸೂಲಿ ಮಾಡುತ್ತಿದೆ. ಇದೀಗ ದಂಡ ವಿಧಿಸುವ ಅಧಿಕಾರವನ್ನು ಪೊಲೀಸರಿಗೂ ನೀಡಲಾಗಿದೆ.

ಮಾಸ್ಕ್ ಹಾಕದಿದ್ದವರಿಗೆ ಸಾವಿರ ರೂ. ದಂಡ ವಿಧಿಸುವ ನಿಯಮವನ್ನು ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ಮುಂದಾಗಿದೆ. ಇದೀಗ ಸರ್ಕಾರದ ಈ ಕ್ರಮ ಭಾರೀ ಜನಾಕ್ರೋಶಕ್ಕೂ ಕಾರಣವಾಗಿದೆ.