ಈಗ ಯಾವುದೇ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಯ್ತು ಅಂದ್ರೆ ಅದನ್ನು ಸರಿಮಾಡಿಸೋದೇ ಒಂದು ದೊಡ್ಡ ತಲೆಬಿಸಿಯ ಕೆಲಸ. ಈ ಮಧ್ಯೆ ಭಾರತದಲ್ಲಿ 10 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಐಟೆಲ್ ಕಂಪನಿ, ತನ್ನ ಗ್ರಾಹಕರಿಗೆ ವಿಶೇಷ ಉಡುಗೊರೆಯಾಗಿ ಫೀಚರ್ ಫೋನ್‌ಗಳ ಮೇಲೆ ಒಂದು ವರ್ಷದ ‘ಕೌಂಟರ್ ರಿಪ್ಲೇಸ್‌ಮೆಂಟ್’ ಆಫರ್ ಅನ್ನು ಘೋಷಿಸಿದೆ. ಈ ಆಫರ್‌ನಡಿ, ಫೋನ್‌ನಲ್ಲಿ ಯಾವುದೇ ಉತ್ಪಾದನಾ ದೋಷ ಕಂಡುಬಂದರೆ ರಿಪೇರಿ ಮಾಡುವ ಬದಲು ನೇರವಾಗಿ ಹೊಸ ಫೋನ್ ನೀಡಲಾಗುತ್ತದೆ.
ಕಡಿಮೆ ಬೆಲೆ, ಉತ್ತಮ ಗುಣಮಟ್ಟ ಮತ್ತು ಬಾಳಿಕೆಗೆ ಹೆಸರಾದ ಐಟೆಲ್, ಕಳೆದ ಒಂದು ದಶಕದಲ್ಲಿ ದೇಶದ ಹಳ್ಳಿ ಹಳ್ಳಿಗಳಿಗೂ ತಲುಪಿ ದೊಡ್ಡ ಗ್ರಾಹಕ ವಲಯವನ್ನು ನಿರ್ಮಿಸಿಕೊಂಡಿದೆ. ಕಂಪನಿಯು ಭಾರತದಲ್ಲಿ ಈಗಾಗಲೇ 15 ಕೋಟಿ ಗ್ರಾಹಕರನ್ನು ತಲುಪಿರುವುದಾಗಿ ತಿಳಿಸಿದೆ.
ಈ ಬಗ್ಗೆ ಮಾತನಾಡಿದ ಐಟೆಲ್ ಇಂಡಿಯಾ ಸಿಇಒ ಅರಿಜಿತ್ ತಲಾಪಾತ್ರ ಅವರು, “ಗ್ರಾಹಕರ ವಿಶ್ವಾಸ ಮತ್ತು ಬೆಂಬಲದಿಂದಲೇ ನಾವು ಈ ಸಾಧನೆ ಮಾಡಲು ಸಾಧ್ಯವಾಗಿದೆ. ಅವರ ನಂಬಿಕೆಯೇ ನಮ್ಮ ಬಲ,” ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಮೊಬೈಲ್ ಫೋನ್ ಸಮಸ್ಯೆ ಉಂಟಾದರೆ, ಸರ್ವಿಸ್ ಸೆಂಟರ್‌ಗಳಿಗೆ ಹೋಗಿ ರಿಪೇರಿ ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ ಐಟೆಲ್ ಇದೀಗ ಈ ತೊಂದರೆಯನ್ನು ಕಡಿಮೆ ಮಾಡಲು ನೇರ ರಿಪ್ಲೇಸ್‌ಮೆಂಟ್ ಸೌಲಭ್ಯವನ್ನು ಪರಿಚಯಿಸಿದೆ. ಒಂದು ವರ್ಷದ ಒಳಗೆ ಉತ್ಪಾದನಾ ದೋಷ ಕಂಡುಬಂದರೆ ಗ್ರಾಹಕರು ಹೊಸ ಫೋನ್ ಪಡೆಯಬಹುದು.
ಐಟೆಲ್ ಕಂಪನಿಯ ಮುಖ್ಯ ಉದ್ದೇಶ ಸಾಮಾನ್ಯ ಜನರಿಗೆ ಅಗ್ಗದ ದರದಲ್ಲಿ ತಂತ್ರಜ್ಞಾನವನ್ನು ತಲುಪಿಸುವುದಾಗಿದೆ. ಸ್ಮಾರ್ಟ್‌ಫೋನ್‌ಗಳ ಜೊತೆಗೆ ಫೀಚರ್ ಫೋನ್‌ಗಳಲ್ಲಿಯೂ ಕಂಪನಿ ಉತ್ತಮ ಸ್ಥಾನವನ್ನು ಪಡೆದಿದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ತಂತ್ರಜ್ಞಾನವನ್ನು ಸುಲಭವಾಗಿ ದೊರಕಿಸುವಲ್ಲಿ ಐಟೆಲ್ ಪ್ರಮುಖ ಪಾತ್ರ ವಹಿಸಿದೆ.
ಐಟೆಲ್ ಫೋನ್ ಬಳಕೆದಾರರು ಈ ಹೊಸ ಆಫರ್‌ನ ಲಾಭವನ್ನು ಪಡೆದುಕೊಳ್ಳುವಂತೆ ಕಂಪನಿ ಮನವಿ ಮಾಡಿದೆ.

















