ಐಪಿಎಲ್ 14ನೇ ಆವೃತ್ತಿ: ಉಳಿದಿರುವ ಪಂದ್ಯಗಳ ಪುನರಾರಂಭಕ್ಕೆ ಮುಹೂರ್ತ ಫಿಕ್ಸ್

ನವದೆಹಲಿ: ಐಪಿಎಲ್​​ -2021ರ ಮುಂದುವರಿದ ಪಂದ್ಯಗಳು ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಅಕ್ಟೋಬರ್ 15 ರಂದು ನಡೆಯಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ಇಂದು ತಿಳಿಸಿದೆ ಎಂದು ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ಪಂದ್ಯಗಳು ಆಯೋಜನೆಗೊಳ್ಳಲಿವೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಬಿಸಿಸಿಐ ಐಪಿಎಲ್ ಪಂದ್ಯಾವಳಿಗಳನ್ನು ಅರ್ಧಕ್ಕೆ ಮೊಟಕುಗೊಳಿಸಿ ಮುಂದೂಡಿತ್ತು. ಆ ಬಳಿಕ ಮೇ 29ರಂದು ನಡೆದ ಸಭೆಯಲ್ಲಿ ಯುಎಇನಲ್ಲಿ ಪಂದ್ಯ ಆಯೋಜನೆ ಮಾಡಲು ಬಿಸಿಸಿಐ ತೀರ್ಮಾನಿಸಿತ್ತು.

ಅದರಂತೆ ಐಪಿಎಲ್ 14ನೇ ಆವೃತ್ತಿಯಲ್ಲಿ ಉಳಿದಿರುವ ಪಂದ್ಯಗನ್ನು ಯುಎಇನ ಅಬುಧಾಬಿ, ಶಾರ್ಜಾ, ದುಬೈ ಮೈದಾನಗಳಲ್ಲಿ ಆಯೋಜಿಸಲು ಸಿದ್ಧತೆ ನಡೆಸಿದೆ.ನಿರ್ಧಾರ ತೆಗೆದುಕೊಂಡಿತ್ತು. 13ನೇ ಆವೃತ್ತಿಯ ಐಪಿಎಲ್​ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಿ ಬಿಸಿಸಿಐ ಯಶಸ್ಸು ಕಂಡಿತ್ತು.