ಭಾರತೀಯ ಕಂಪೆನಿ ಸೆಕ್ರೆಟರಿ(ಸಿಎಸ್-ಇಇಟಿ) ಪರೀಕ್ಷೆಯಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

ಕಾರ್ಕಳ: ಭಾರತೀಯ ಕಂಪೆನಿ ಸೆಕ್ರೆಟರಿ ಮಂಡಳಿಯವರು ನಡೆಸಿದ ರಾಷ್ಟ್ರಮಟ್ಟದ ಕಂಪೆನಿ ಸೆಕ್ರೆಟರಿಯ ಪ್ರವೇಶ ಪರೀಕ್ಷೆ-2025 (ಸಿಎಸ್‌ಇಇಟಿ)ಯಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಏಳು ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ. ಸಂಸ್ಥೆಯಿಂದ ಒಟ್ಟು 11 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ ಏಳು ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಸಂಸ್ಥೆಯು ಅಭೂತಪೂರ್ವ ಸಾಧನೆಗೈದಿದೆ. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಜೇಡನ್ ಕುವೆಲ್ಲೊ (171/200), ಜಿತೇಶ್ ಪಿಂಟೊ (147/200), ಸಿಯಾ ಕ್ಯಾರೊಲ್ ಡಿಕ್ರೂಸ್(123/200), ಮಹಿಪಾಲ್ ಸಿಂಗ್(118/200) ಸ್ವಸ್ತಿಕ್ ಎಸ್ ಪೂಜಾರಿ (118/200), ನಿರಾಲಿ […]
ಕಾರ್ಕಳ ಜ್ಞಾನಸುಧಾ: ‘ವಂದೇ ಮಾತರಂ-150’ ಸಂಭ್ರಮಾಚರಣೆ

ಗಣಿತನಗರ: ಭಾರತ ಆರ್ಥಿಕವಾಗಿ, ಉದ್ಯಮರಂಗದಲ್ಲಿ, ಕೈಗಾರಿಕಾ ರಂಗದಲ್ಲಿ ವಿವಿಧ ಕ್ಷೇತ್ರದಲ್ಲಿ ಸಮರ್ಥವಾಗಿ, ಸಮೃದ್ಧವಾಗಿ, ಸ್ವಾಭಿಮಾನಿಯಾಗಿ ಹಾಗೂ ಶಕ್ತಿಶಾಲಿಯಾಗಿ ಬೆಳೆದು ನಿಂತಿದೆ. ಇಂದು ಭಾರತ ಬದಲಾದರು, ವಂದೇ ಮಾತರಂ ಬದಲಾಗದೆ ಕೋಟಿ ಕೋಟಿ ಭಾರತೀಯರಲ್ಲಿ ಇಂದಿಗೂ ಅನುರಣಿಸುತ್ತಿದೆ ಉಡುಪಿ-ಚಿಕ್ಕಮಗಳೂರು ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ ವಂದೇ ಮಾತರಂ – 150 ಐತಿಹಾಸಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯರಾದ ಶ್ರೀಮತಿ […]
ಅಮೆಜಾನ್ ಉದ್ಯೋಗಿಗಳಿಗೆ ಬಿಗ್ ಶಾಕ್: 1,800ಕ್ಕೂ ಅಧಿಕ ಎಂಜಿನಿಯರ್ಸ್ ಕೆಲಸದಿಂದ ವಜಾ!

ನವದೆಹಲಿ: ಅಮೆಜಾನ್ ಕಂಪನಿಯ ಇತಿಹಾಸದಲ್ಲಿಯೇ ಅತಿದೊಡ್ಡ ಸಿಬ್ಬಂದಿ ಕಡಿತ ಮುಂದುವರಿದಿದ್ದು, ವಿಶೇಷವಾಗಿ ಎಂಜಿನಿಯರಿಂಗ್ ವಿಭಾಗದ ಮೇಲೆ ಪರಿಣಾಮ ಬೀರಿದೆ. ಅಲ್ಲದೇ ಅಕ್ಟೋಬರ್ ತಿಂಗಳಿನಲ್ಲಿ 1,800ಕ್ಕೂ ಅಧಿಕ ಎಂಜಿನಿಯರ್ ಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಕಾರ್ಮಿಕ ಇಲಾಖೆಯ ದಾಖಲೆಗಳು ತಿಳಿಸಿವೆ. ಕಂಪನಿಯು 2025 ರ ಅಕ್ಟೋಬರ್ ನಲ್ಲಿ 14,000 ಕ್ಕೂ ಹೆಚ್ಚು ಉದ್ಯೋಗ ಕಡಿತ ಘೋಷಿಸಿತ್ತು. ಈ ಉದ್ಯೋಗ ಕಡಿತ ಕ್ಲೌಡ್ ಸೇವೆಗಳು ಮತ್ತು ತಾಂತ್ರಿಕ ವಿಭಾಗದಿಂದ ಹಿಡಿದು ಚಿಲ್ಲರೆ ವ್ಯಾಪಾರ, ಜಾಹೀರಾತು ಮತ್ತು ದಿನಸಿಗಳವರೆಗೆ ಅದರ […]
ಆಳ್ವಾಸ್ ಉಪನ್ಯಾಸಕಿ ರುಚಿಕಾ ರೋಶನ್‌ಗೆ ಡಾಕ್ಟರೇಟ್ ಪದವಿ

ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ರುಚಿಕಾ ರೋಶನ್ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ. ಆಳ್ವಾಸ್ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ರಾಮ್ ಭಟ್ ಅವರ ಮಾರ್ಗದರ್ಶನದಲ್ಲಿ ಪಶ್ಚಿಮ ಘಟ್ಟ ಪ್ರದೇಶಗಳ ಕಾಡು ಮಾವಿನ ಪ್ರಭೇದಗಳ ಆನುವಂಶಿಕ ವ್ಯತ್ಯಾಸದ ಮೌಲ್ಯಮಾಪನ ಮಹಾಪ್ರಬಂಧ ಮಂಡಿಸಿದ್ದರು. ರುಚಿಕಾ ಅವರು ಬಂಟ್ವಾಳ ತಾಲೂಕಿನ ವಾಮದಪದವು ಪಿಲಿಮೊಗರು ಗ್ರಾಮದ ಜಿನ್ನಪ್ಪ ಪೂಜಾರಿ-ಲೀಲಾವತಿ ದಂಪತಿಯ ಪುತ್ರಿ. ಕಾರ್ಕಳ ಪತ್ತೊಂಜಿಕಟ್ಟೆಯ ವಿಠಲ್ ಎಂ. ಸಾಲ್ಯಾನ್ ಹಾಗೂ ವಸಂತಿ ವಿ. […]
ಭಟ್ಕಳ: ಹೋಮ್ ಸ್ಟೇ ಸ್ವಿಮ್ಮಿಂಗ್ ಪೂಲ್‍ಗೆ ಬಿದ್ದು ಬಾಲಕ ಮೃತ್ಯು

ಕಾರವಾರ: ಹೋಮ್ ಸ್ಟೇ ಸ್ವಿಮ್ಮಿಂಗ್ ಪೂಲ್‍ಗೆ ಬಿದ್ದು ಮಗು ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಲಿಯಲ್ಲಿ ನಡೆದಿದೆ. ಮೃತಪಟ್ಟ ಬಾಲಕನನ್ನು ಭಟ್ಕಳದ ಮೌಲವಿ ಶಾಹಿದುಲ್ಲಾಹ ಎಂಬವರ ಪುತ್ರ ಮೊಹಮ್ಮದ್ ಮುಸ್ತಾಕೀಮ್ ಶೇಖ್ (5) ಎಂದು ಗುರುತಿಸಲಾಗಿದೆ. ಕುಟುಂಬದವರ ಜೊತೆ ಆಟವಾಡುತ್ತಿದ್ದಾಗ ಮಗು ಕಾಲುಜಾರಿ ಈಜುಕೊಳಕ್ಕೆ ಬಿದ್ದಿದೆ. ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಶಾಹಿದುಲ್ಲಾಹ ಹೋಮ್ ಸ್ಟೇ ಮನೆಯನ್ನು ಲೀಸ್‍ಗೆ ಪಡೆದಿದ್ದರು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.