ಉಡುಪಿ: ತ್ರಿಶಾ ವಿದ್ಯಾ ಕಾಲೇಜಿನ ಬಿ.ಕಾಂ ಫೋಕಸ್ 360 ಯ ನೂತನ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷ, ಲೆಕ್ಕ ಪರಿಶೋಧಕ ಗೋಪಾಲ ಕೃಷ್ಣ ಭಟ್, ಬಿ.ಕಾಂ ಫೋಕಸ್ 360 ವಿದ್ಯಾರ್ಥಿಗಳ ಸೃಜನಶೀಲ ಬೇಳವಣಿಗೆಗೆ ಪೂರಕವಾಗಿರುವುದು ಮಾತ್ರವಲ್ಲದೆ ಅವರಲ್ಲಿ ವೃತ್ತಿ ಕೌಶಲಗಳನ್ನು ಹೆಚ್ಚಿಸುತ್ತದೆ ಎಂದರು. ನೂತನ ಬಿ.ಕಾಂ ಫೋಕಸ್ 360 ಯ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕ ಪ್ರೊ. ಡಾ.ಅನಂತ ಪ್ರಭು ಜಿ. ಮಾತನಾಡಿ, ಅಧ್ಯಯನ ಎನ್ನುವುದು ನಿರಂತರವಾಗಿದ್ದಾಗ ಮಾತ್ರ ಗೆಲುವು ನಮ್ಮದ್ದಾಗುತ್ತದೆ ಎಂದು ತಿಳಿಸಿದರು.
ತ್ರಿಶಾ ವಿದ್ಯಾ ಕಾಲೇಜಿನ ಪ್ರಾಂಶುಪಾಲ ಗುರುಪ್ರಸಾದ್ ರಾವ್, ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಇಂದು ರೀತಿ, ತ್ರಿಶಾ ಸಮೂಹ ಸಂಸ್ಥೆಗಳ ಟ್ರಸ್ಟಿಗಳಾದ ನಮಿತಾ ಜಿ ಭಟ್ ಮತ್ತು ರಾಮ ಪ್ರಭು ಉಪಸ್ಥಿತರಿದ್ದರು.
ಉಪನ್ಯಾಸಕಿ ಪ್ರೊ. ಐಶ್ವರ್ಯ ಕಾಮತ್ ನಿರೂಪಿಸಿದರು.