ಉಡುಪಿ ಉಡುಪಿ ನಗರಸಭಾ ವ್ಯಾಪ್ತಿಯ ಕಟ್ಟಡ ಮಾಲಿಕರು ಮತ್ತು ಅನುಭೋಗದಾರರು ಈಗಾಗಲೇ ಇ-ಖಾತೆ ಪಡೆದವರನ್ನು ಹೊರತುಪಡಿಸಿ, ಉಳಿದ ಕಟ್ಟಡಗಳನ್ನು ಗಣಿಕೀಕರಣ ಮಾಡಲು ಪೌರಾಡಳಿತ ನಿರ್ದೇಶನಾಲಯವು ಆಸ್ತಿ ಕಣಜ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಸ್ಥಳೀಯ ಸಂಸ್ಥೆಯ ಎಲ್ಲಾ ಕಟ್ಟಡಗಳನ್ನು ಆನ್ಲೈನ್ ಮಾಡಬೇಕಾಗಿದ್ದು, ಆಸ್ತಿ ಕಣಜ ತಂತ್ರಾಂಶದಲ್ಲಿ ಈ ಕೆಳಗೆ ನಮೂದಿಸಲಾದ ದಾಖಲೆಗಳನ್ನು ಕಡ್ಡಾಯವಾಗಿ ದಾಖಲಿಸುವಂತೆ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
ಕಟ್ಟಡವಾಗಿದ್ದಲ್ಲಿ: ಕಟ್ಟಡದ ಮಾಲೀಕರ ಭಾವಚಿತ್ರ ಮತ್ತು ಆಧಾರ್ ಹೊರತುಪಡಿಸಿ, ಒಂದು ಗುರುತಿನ ದಾಖಲೆ, ಮೊಬೈಲ್ ನಂಬರ್ ಮತ್ತು ಇ-ಮೇಲ್ ಐ.ಡಿ. ಅನುಭೋಗದಾರರು (ಬಾಡಿಗೆದಾರರು) ಹೊರತುಪಡಿಸಿ ನಾಮಿನಿ, ಭಾವಚಿತ್ರ, ಗುರುತಿನ ದಾಖಲೆ, ಮೊಬೈಲ್ ನಂಬರ್ ಮತ್ತು ಇ-ಮೇಲ್ ಐ.ಡಿ, ಚಾಲ್ತಿ ಸಾಲಿನ ತೆರಿಗೆ ಪಾವತಿ ನಮೂನೆ-2 ಬ್ಯಾಂಕ್ ಚಲನ್, ವಿದ್ಯುತ್ ಮೀಟರ್ ಆರ್.ಆರ್.ಬಿಲ್ / ನೀರಿನ ಸಂಪರ್ಕದ ನಂಬರ್, ಕಟ್ಟಡದ ಫೋಟೋ, 2000 ನೇ ಸಾಲಿನ ನಂತರದಾಗಿದ್ದಲ್ಲಿ ಕಟ್ಟಡ ಪರವಾನಿಗೆ ಆದೇಶ, ಕಟ್ಟಡ ಪ್ರವೇಶಕ್ಕೆ ಅನುಮತಿ ಪತ್ರ ಮತ್ತು ಅನುಮೋದಿತ ನಕ್ಷೆ, ಕ್ರಯಪತ್ರ, ದಾನಪತ್ರ, ಹಕ್ಕು ಖುಲಾಸೆ ಪತ್ರ
ಹಾಗೂ 2000 ಪೂರ್ವದ ಕಟ್ಟಡವಾಗಿದ್ದಲ್ಲಿ ಕಟ್ಟಡ ಪರವಾನಿಗೆ ಆದೇಶ ಮತ್ತು ನಕ್ಷೆ ಹಾಗೂ ಆರ್.ಟಿ.ಸಿ (ಪಹಣಿ ಪತ್ರಿಕೆ), ಅಪಾರ್ಟ್ಮೆಂಟ್ ಫ್ಲ್ಯಾಟ್ ಕಟ್ಟಡವಾಗಿದ್ದಲ್ಲಿ ಕ್ರಯಪತ್ರ ಹಾಗೂ ದಾನಹಕ್ಕು ಖುಲಾಸೆ ಪತ್ರ, ಸರ್ಕಾರ/ ಸ್ಥಳೀಯ ಸಂಸ್ಥೆ/ ಕರ್ನಾಟಕ ಗೃಹ ಮಂಡಳಿ ಇತ್ಯಾದಿ ಇಲಾಖೆ ಮಂಜೂರಿ ಮಾರಾಟವಾಗಿದ್ದಲ್ಲಿ ಮಂಜೂರಿ ಆದೇಶ, ಹಕ್ಕುಪತ್ರ, 94 ಸಿ 94 ಸಿಸಿ ಹಾಗೂ ಕ್ರಯಪತ್ರ ಪ್ರತಿ.
ಖಾಲಿ ನಿವೇಶನವಾಗಿದ್ದಲ್ಲಿ: ಆರ್.ಟಿ.ಸಿ/ ಮ್ಯೂಟೇಶನ್ ಎಂಟ್ರಿ, ಕ್ರಯಸಾಧನ, ದಾನಪತ್ರ, ಹಕ್ಕು ಬಿಡುಗಡೆ ಪತ್ರ, ಮರಣ ಶಾಸನ, ಭೂ ಪರಿವರ್ತನಾ ಆದೇಶ/ ತಹಶೀಲ್ದಾರರ ಹಿಂಬರಹ ಆದೇಶ/ ಸಹಾಯಕ ಆಯುಕ್ತರ ಆದೇಶ, ವಿನ್ಯಾಸ ಆದೇಶದ ಪ್ರತಿ, ಪ್ರಾಧಿಕಾರದ ಅನುಮೋದಿತ ನಕ್ಷೆ, ನಿವೇಶನದ ಮಾಲಕರ ಭಾವಚಿತ್ರ/ ಗುರುತಿನ ದಾಖಲೆ ಮತ್ತು ಚಾಲ್ತಿ ಸಾಲಿನ ಖಾಲಿ ನಿವೇಶನ ತೆರಿಗೆ ಪಾವತಿಯನ್ನು ದಾಖಲಿಸುವಂತೆ ಪ್ರಕಟಣೆ ತಿಳಿಸಿದೆ.