ಪರಶುರಾಮ ಥೀಮ್ ಪಾರ್ಕ್: ವಿದ್ಯುತ್ ದೀಪಾಲಂಕಾರ ಉದ್ಘಾಟನೆ

ಕಾರ್ಕಳ: ಇಲ್ಲಿನ ಬೈಲೂರಿನಲ್ಲಿ ಜ.27 ರಿಂದ 29 ರವರೆಗೆ ನಡೆಯಲಿರುವ ಪರಶುರಾಮ ಥೀಮ್ ಪಾರ್ಕ್ ನ ಉದ್ಘಾಟನೆಗೂ ಮುನ್ನ ವಿದ್ಯುತ್ ದೀಪಾಲಂಕಾರ ಉದ್ಘಾಟನೆಯನ್ನು ಇಂಧನ ಸಚಿವ ಸುನಿಲ್ ಕುಮಾರ್ ನೆರವೇರಿಸಿದರು. ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಜಿ.ಪಂ.ಸಿಇಒ ಪ್ರಸನ್ನ ಎಚ್, ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಜಿಲ್ಲಾ ಎಸ್.ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಮೆಸ್ಕಾಂ ಎಂ.ಡಿ ಮಂಜಪ್ಪ, ಬೋಳ ಪ್ರಭಾಕರ್ ಕಾಮತ್ ಮತ್ತು ರಮೇಶ್ ಕಲ್ಲೊಟ್ಟೆ ಉಪಸ್ಥಿತರಿದ್ದರು.

ಎಲ್ಲಿಂದ ಬರ್ತಿರೋ ನೀವೆಲ್ಲಾ ಎಪಿಸೋಡ್ 4 ಯೂಟ್ಯೂಬ್ ನಲ್ಲಿ ಬಿಡುಗಡೆ

ಸಿನಿಮಾ ಸೈಕಲ್ ಪ್ರೊಡಕ್ಷನ್ಸ್ ಮತ್ತು ಭಾಗ್ಯರತ್ನ ಪಿಕ್ಚರ್ಸ್ ನ ಎಲ್ಲಿಂದ ಬರ್ತಿರೋ ನೀವೆಲ್ಲಾ ವೆಬ್ ಸೀರಿಸ್ ನ 4 ನೇ ಎಪಿಸೋಡ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.   https://www.youtube.com/watch?v=1uKpWmv801Q

ಜ.26 ರಂದು ಮಣಿಪಾಲ್ ಇನ್ ಹೊಟೇಲಿನಲ್ಲಿ ಬೃಹತ್ ರಕ್ತದಾನ ಶಿಬಿರ

ಉಡುಪಿ: ಗಣರಾಜ್ಯೋತ್ಸವ ಹಾಗೂ ಮಣಿಪಾಲ್ ಇನ್ ಹೋಟೇಲಿನ 3 ನೇ ವಾರ್ಷಿಕೋತ್ಸವದ ಪ್ರಯುಕ್ತ ಜ.26 ರಂದು ಮಣಿಪಾಲ್ ಇನ್ ಹೋಟೇಲಿನ 7 ನೇ ಮಹಡಿಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಆಡಳಿತ ನಿರ್ದೇಶಕ ಮೌಲಾನಾ ಇಬ್ರಾಹಿಂ ಗಂಗೊಳ್ಳಿ ಹೇಳಿದರು. ಅವರು ಇಂದು ಹೊಟೇಲಿನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಉದುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರ ಮತ್ತು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ಬೆಳಿಗ್ಗೆ 7.30 ರಿಂದ 11.30 ರವರೆಗೆ ರಕ್ತದಾನ ಶಿಬಿರ […]

ಮಲ್ಪೆ: ಮೀನುಗಾರರ ಬಲೆಗೆ ಬಿತ್ತು ಪ್ರಪಂಚದಲ್ಲೇ ಅತಿ ಅಪರೂಪದ ಬಂಗಾರ ವರ್ಣದ ಅಂಜಲ್

ಮಲ್ಪೆ: ಇಲ್ಲಿನ ಮೀನುಗಾರರ ಬಲೆಗೆ ಪ್ರಪಂಚದಲ್ಲೇ ಅತಿ ಅಪರೂಪವೆನಿಸಿದ ಬಂಗಾರ ವರ್ಣದ ಅಂಜಲ್ ಮೀನೊಂದು ಸಿಲುಕಿ ಭಾರೀ ಸುದ್ದಿಯಾಗಿದೆ. ಮೀನು 16 ಕೆ.ಜಿ ತೂಕವಿದ್ದು ಕೆ.ಜಿಗೆ 600 ರೂಪಾಯಿಯಂತೆ ಮಾರಾಟವಾಗಿದೆ ಎಂದು ವರದಿಯಾಗಿದೆ.

ಗುಂಡಿಬೈಲು: ಐಡಿಯಲ್ ಚಿಕನ್ 20ನೇ ರಿಟೇಲ್ ಮಳಿಗೆ ಶುಭಾರಂಭ

ಉಡುಪಿ: ಕಳೆದ 18 ವರ್ಷಗಳಿಂದ ಕರ್ನಾಟಕ ಮತ್ತು ಕೇರಳದಲ್ಲಿ ಮನೆಮಾತಾಗಿರುವ ಹೆಸರಾಂತ ಕೋಳಿ ಉತ್ಪಾದನಾ ಮತ್ತು ಮಾರಾಟ ಸಂಸ್ಥೆ ಐಡಿಯಲ್ ಚಿಕನ್ ಇದರ 20ನೇ ರಿಟೇಲ್ ಮಳಿಗೆಯು ಗುಂಡಿಬೈಲಿನಲ್ಲಿ ಜ.25 ರಂದು ಶುಭಾರಂಭಗೊಂಡಿತು. ಉಡುಪಿ ಪೆರಂಪಳ್ಳಿ ಚರ್ಚ್ ನ ಫಾದರ್ ಅನಿಲ್ ಡಿಸೋಜಾ ಅವರು ಆಶೀರ್ವಚನ ನೀಡಿದರು. ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್ ನ ಮಾಲಕ ಡಾ. ಜೆರಿ ವಿನ್ಸೆಂಟ್ ಡಯಾಸ್ ರಿಬ್ಬನ್ ಕತ್ತರಿಸುವ ಮೂಲಕ ಮಳಿಗೆಯನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನೈನಾ ಫ್ಯಾನ್ಸಿ ಸ್ಟೋರ್ ಮಾಲಕ […]