ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, ಬಂಟಕಲ್ ಇದರ ವತಿಯಿಂದ ಕೆಇಎ – ಸಿಇಟಿ 2026 ಪ್ರವೇಶ ಪ್ರಕ್ರಿಯೆಯ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ಜಾಗೃತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕೆಇಎ- ಸಿಇಟಿ 2026ರ ಪ್ರವೇಶ ಹಾಗೂ ಕೌನ್ಸೆಲಿಂಗ್ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಯ್ಕೆ ನಮೂದು ಸೀಟು ಹಂಚಿಕೆ , ಶುಲ್ಕ ಪಾವತಿ ಹಾಗೂ ಕಾಲೇಜಿಗೆ ವರದಿ ಮಾಡುವ ಪ್ರಕ್ರಿಯೆ ಸೇರಿದಂತೆ ಸಿ ಇ ಟಿ ಪ್ರವೇಶ ಸಂಬಂಧಿತ ವಿವಿಧ ಹಂತಗಳ ಕುರಿತು ಸಮಗ್ರ ಮಾಹಿತಿ ನೀಡಲಾಗುವುದು.
ಸಿಇಟಿ 2026 ಪ್ರವೇಶ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಯಾವ ರೀತಿ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆಯು ತಿಳಿಸಲಾಗುವುದು ತಿಳಿಸಲಿದ್ದಾರೆ.
ಕಾರ್ಯಕ್ರಮವು ಕೆಳಕಂಡ ಸ್ಥಳಗಳಲ್ಲಿ ನಡೆಯಲಿದೆ:
- 12 ಜೂನ್ 2026 (ಶುಕ್ರವಾರ ) ಬೆಳಿಗ್ಗೆ 9.30 ಗಂಟೆಗೆ – ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು, ಕುಕ್ಕುಂದೂರು ಕಾರ್ಕಳ
- 13 ಜೂನ್ 2026 (ಶನಿವಾರ) ಮಧ್ಯಾಹ್ನ 2.00 ಗಂಟೆಗೆ – ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜು, ಕುಂದಾಪುರ
- 18 ಜೂನ್ 2026 (ಗುರುವಾರ) ಬೆಳಿಗ್ಗೆ 9.30 ಗಂಟೆಗೆ – ಎಸ್ ಎಂ ವಿ ಐ ಟಿ ಎಂ, ಬಂಟಕಲ್, ಉಡುಪಿ
ಕಾರ್ಯಕ್ರಮದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಯು ಕೆಇಎ -ಸಿಇಟಿ ಪ್ರವೇಶ ಹಾಗೂ ಕೌನ್ಸೆಲಿಂಗ್ ಪ್ರಕ್ರಿಯೆಯ ವಿವಿಧ ಅಂಶಗಳ ಕುರಿತು ವಿವರವಾದ ಮಾರ್ಗದರ್ಶನ ನೀಡಲಿದ್ದು, ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆಯನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡು ತಮ್ಮ ಉನ್ನತ ಶಿಕ್ಷಣದ ಆಯ್ಕೆಗಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಸಹಕಾರಿಯಾಗಲಿದೆ.
ವೃತ್ತಿಪರ ಹಾಗೂ ಎಂಜಿನಿಯರಿಂಗ್ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಬಯಸುವ ಎಲ್ಲಾ ಕೆಇಎ – ಸಿಇಟಿ ಅಭ್ಯರ್ಥಿಗಳು ಹಾಗೂ ಅವರ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆಯುವಂತೆ ಎಸ್‍ಎಂವಿಐಟಿಎಂ, ಬಂಟಕಲ್ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ – 9611615001, 0820-2589183

















