ಆಕೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ. ಆತ ಬಾಲಿವುಡ್ ನ ಬಹುಬೇಡಿಕೆಯ ಸ್ಟಾರ್ ನಟ. ಬಾಲಿವುಡ್ ಗೂ ಸಿನೆಮಾಗೂ ನಂಟು ಇಂದು ನಿನ್ನೆಯದಲ್ಲ. ಹಲವಾರು ಕ್ರಿಕೆಟ್ ಆಟಗಾರರು ಸಿನಿಮಾ ನಟಿಯರ ಪ್ರೇಮ ಪಾಶದಲ್ಲಿ ಸಿಲುಕಿ ವಿವಾಹ ಬಂಧನಕ್ಕೊಳಗಾದ ನಿದರ್ಶನಗಳಿವೆ.
ಇದೀಗ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಕೂಡಾ ಬಾಲಿವುಡ್ ಬಾಯ್ ಕಾರ್ತಿಕ್ ಆರ್ಯನ್ ಗೆ ಫಿದಾ ಆಗಿದ್ದಾರೆ ಎಂದು ಸುದ್ದಿ. ಇತ್ತೀಚಿನ ಒಂದು ಪತ್ರಿಕಾಗೋಷ್ಠಿಯಲ್ಲಿ ಸ್ಮೃತಿ, “ನಾನು ಸೋನು ಕೆ ಟಿಟು ಕಿ ಸ್ವೀಟಿ ಚಲನಚಿತ್ರವನ್ನು ನೋಡಿದ್ದೇನೆ. ನಾನು ಈ ಚಿತ್ರವನ್ನು ತುಂಬಾ ಇಷ್ಟಪಟ್ಟೆ, ಹಾಗಾಗಿ ನಾನು ಈ ಚಿತ್ರವನ್ನು 2 ಬಾರಿ ನೋಡಿದೆ. ನಾನು ಈ ಚಿತ್ರವನ್ನು ನಿಜವಾಗಿಯೂ ಇಷ್ಟಪಟ್ಟೆ ಮತ್ತು ಕಾರ್ತಿಕ್ ಆರ್ಯನ್ ನನ್ನ ಕ್ರಶ್ ” ಎಂದಿದ್ದಾರೆ. ಅಂದ ಹಾಗೆ ಸ್ಮೃತಿ ಮಂಧನಾ ಮೇಲೆ ಕ್ರಶ್ ಆಗಿರುವ ಪಡ್ಡೆ ಹುಡುಗರ ಸಂಖ್ಯೆಯೇನು ಕಮ್ಮಿ ಇಲ್ಲ. ಈ ಕ್ರಿಕೆಟ್ ಆಟಗಾರ್ತಿಯ ಬ್ಯಾಟಿಂಗ್ ಮತ್ತು ಚೆಲುವಿಗೆ ಮನಸೋಲದವರು ಯಾರಿದ್ದಾರೆ?
ಹದಿಹರೆಯದ ಹುಡುಗಿಯರಲ್ಲಿ ಕಾರ್ತಿಕ್ ಆರ್ಯನ್ ಕ್ರೇಜ್ ಸ್ವಲ್ಪ ಜೋರಾಗಿಯೆ ಇದೆ. ಕಾರ್ತಿಕ್ ಆರ್ಯನ್ ಮನೆ ಮುಂದೆ ಅಭಿಮಾನಿಯರ ದಂಡೇ ಬೀಡು ಬಿಟ್ಟಿರುತ್ತದೆ. ಇದೀಗ ಆತನ ಅಭಿಮಾನಿಗಳ ಸಾಲಿನಲ್ಲಿ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿಯಾದ ಸ್ಮೃತಿ ಮಂಧನಾ ಕೂಡಾ ಸೇರಿರುವುದು ವಿಶೇಷ.