ರಷ್ಯಾ- ಯುಕ್ರೆನ್ ಯುದ್ಧ: ಯುಕ್ರೆನ್ ನಲ್ಲಿ ಸಿಲುಕಿರುವ ಮಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ರಾಜ್ಯದ ಹತ್ತು ವಿದ್ಯಾರ್ಥಿಗಳು

ಮಂಗಳೂರು: ರಷ್ಯಾ- ಯುಕ್ರೆನ್ ಯುದ್ಧದಲ್ಲಿ ಮಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ರಾಜ್ಯದ ಹತ್ತು ವಿದ್ಯಾರ್ಥಿಗಳು ಯುಕ್ರೇನ್ ನಲ್ಲಿ ಸಿಲುಕಿದ್ದಾರೆ. ದೇರೇಬೈಲ್ ನಿವಾಸಿ ಅನೈನಾ ಅನ್ನೋ ಅವರು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದು, ಉಕ್ರೇನ್‌ನ ಖಾರ್ಕಿವ್ ನಗರದ ಗಡಿ ಭಾಗದಲ್ಲಿ ‌ನೆಲೆಸಿರೋ ಅನೈನಾ ಮಂಗಳೂರಿನಲ್ಲಿರೋ ತಾಯಿ ಸಂಧ್ಯಾ ಜೊತೆ ಫೋನ್ ಕರೆಯಲ್ಲಿ ಮಾತನಾಡಿದ್ದಾರೆ. ಮತ್ತೋರ್ವ ಮಂಗಳೂರು ಪಡೀಲು ನಿವಾಸಿ ಕ್ಲಾಟನ್ ಅವರು ಸದ್ಯಕ್ಕೆ ಯಾವುದೇ ರೀತಿ ತೊಂದರೆ ಇಲ್ಲ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಶಿವಮೊಗ್ಗ ಬಾಗಲಕೋಟೆ, ಕೋಲಾರ,ಬೆಂಗಳೂರು, ಮೈಸೂರು, ಕಲಬುರಗಿ, […]

“ಶಿವಾಜಿಯ ಪಯಣದ ಹೆಜ್ಜೆ ಗುರುತುಗಳು” ರಾಜ್ಯ ಮಟ್ಟದ ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟ

ಕಾರ್ಕಳ: ಕಾರ್ಕಳ ಛತ್ರಪತಿ ಫೌಂಡೇಶನ್ ಟ್ರಸ್ಟ್ ಇದರ ಆಶ್ರಯದಲ್ಲಿ ನಡೆದ ಶಿವಾಜಿಯ ಪಯಣದ ಹೆಜ್ಜೆ ಗುರುತುಗಳು ಎನ್ನುವ ಲೇಖನ ಸ್ಪರ್ಧೆ ರಾಜ್ಯಮಟ್ಟದಲ್ಲಿ ಆಯೋಜಿಸಿದ್ದು, ಇದರ ಸ್ಪರ್ಧಾ ಫಲಿತಾಂಶ ಹೀಗಿವೆ. ಪ್ರಥಮ: ನಿತಿನ್ ಪವಾರ್ ರಾಯಚೂರ. ದ್ವಿತೀಯ: ಮಹೇಶ್ ಹೈಕಾಡಿ ಹೆಬ್ರಿ. ತೃತೀಯ: ಜ್ಯೋತಿ w/o ಸುರೇಶ್ ಪೂಜಾರಿ ಕಾರ್ಕಳ. ಮೆಚ್ಚುಗೆಯ ಲೇಖನಗಳು: *ಕುಮಾರಿ ಅವನಿ ಉಪಾಧ್ಯಾಯ ಕಾರ್ಕಳ. *ಸಿಂಧೂರ ನಾಯಕ್ ಮಿಯಾರ್. *ಕುಮಾರಿ ಭಾಗ್ಯಶ್ರೀ ಕಾಂತಾವರ. *ಆದಿತ್ಯ ಮತ್ತು ಸುಜಾತಾ ಕಾರ್ಕಳ. ಸ್ಪರ್ಧೆಯಲ್ಲಿ 110 ಲೇಖನಗಳು ಸ್ವೀಕೃತವಾಗಿದ್ದು, […]

ಫೆ.26: ಉಡುಪಿ ಜಿಲ್ಲಾಧಿಕಾರಿ ಕಛೇರಿ ಬಳಿ ಬಿಜೆಪಿ ಬೃಹತ್ ಪ್ರತಿಭಟನೆ

ಉಡುಪಿ: ಸಂವಿಧಾನಾತ್ಮಕವಾಗಿ ನಡೆಯುವ ಅಧಿವೇಶನವನ್ನು ಬಹಿಷ್ಕರಿಸಿದ ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ನಿಲುವನ್ನು ಖಂಡಿಸಿ ಹಾಗೂ ಶಿವಮೊಗ್ಗದಲ್ಲಿ ನಡೆದ ಹರ್ಷ ಅವರ ಹತ್ಯೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಫೆ.26 ಶನಿವಾರ ಬೆಳಿಗ್ಗೆ ಗಂಟೆ 10.00ಕ್ಕೆ ಮಣಿಪಾಲದ ಉಡುಪಿ ಜಿಲ್ಲಾಧಿಕಾರಿ ಕಛೇರಿಯ ಪ್ರತಿಭಟನಾ ಕಟ್ಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಪಕ್ಷದ ಮುಖಂಡರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ […]

ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಡುಪಿ, ಫೆ.24: ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಬೆಂಗಳೂರು ಇವರ ಆದೇಶದಂತೆ ಆದರ್ಶ ಆಸ್ಪತ್ರೆ, ಉಡುಪಿ ಇವರ ಮೂಲಕ ಪ್ರಿವೆನ್ಟೀವ್ ಹೆಲ್ತ್ ಕೇರ್ ಟ್ರೈನಿಂಗ್ ಅಂಡ್ ಚೆಕ್‌ಅಪ್ ಯೋಜನೆಯಡಿ, ಜಿಲ್ಲೆಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಫೆಬ್ರವರಿ 26 ರಂದು ಬೆಳಗ್ಗೆ 11 ಗಂಟೆಗೆ, ನಗರದ ಬೀಡಿನಗುಡ್ಡೆ ದೇವಾಡಿಗರ ಸಭಾಭವನದಲ್ಲಿ ಚಾಲನೆ ನೀಡಲಾಗುವುದು. ಆರೋಗ್ಯ ಶಿಬಿರದ […]

ಉಕ್ರೇನ್‌ನಲ್ಲಿ ಜಿಲ್ಲೆಯ ಪ್ರಜೆಗಳಿದ್ದಲ್ಲಿ ಮಾಹಿತಿ ನೀಡಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ, ಫೆ.24: ರಷ್ಯಾ ಮತ್ತು ಉಕ್ರೇನ್ ದೇಶಗಳ ನಡುವೆ ಯುದ್ದ ನಡೆಯುವ ಸಂಭವವಿದ್ದು, ಈ ಸಂದರ್ಭದಲ್ಲಿ ಉಕ್ರೇನ್ ದೇಶಗಳಲ್ಲಿ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರ  ಉದ್ದೇಶಗಳಿಗೆ ವಾಸವಾಗಿರುವ, ಜಿಲ್ಲೆಗೆ ಸಂಬಂಧಪಟ್ಟ ಭಾರತದ ಪ್ರಜೆಗಳಿದ್ದಲ್ಲಿ, ಅವರ ಬಗ್ಗೆ ಮಾಹಿತಿ ಕಲೆ ಹಾಕುವ ಅವಶ್ಯಕತೆ ಇದ್ದು, ಅಂತಹವರ ಮಾಹಿತಿಯನ್ನು ಸಂಬಂಧಿಸಿರುವವರು ಜಿಲ್ಲಾಧಿಕಾರಿಯವರ ಕಚೇರಿ, ರಜತಾದ್ರಿ ಮಣಿಪಾಲದಲ್ಲಿ ತೆರೆದಿರುವ ಕಂಟ್ರೋಲ್ ರೂಂ. ಸಂಖ್ಯೆ: 1077 ಗೆ ಕರೆ ಮಾಡಿ  ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.