ನವದೆಹಲಿ: ಭಾರತವು ಗುರುವಾರ ಅತ್ಯಂತ ಹೆಚ್ಚಿನ ನಿಖರತೆಯೊಂದಿಗೆ 5,000 ಕಿಲೋಮೀಟರ್ ವ್ಯಾಪ್ತಿಯ ಗುರಿಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿರುವ ಪರಮಾಣು ಸಾಮರ್ಥ್ಯದ ಅಗ್ನಿ V ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಭಾರತವು ಅಗ್ನಿ V ಪರಮಾಣು ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿಯ ರಾತ್ರಿ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಡಿ. 9 ರಂದು ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದ್ದು, ಇದೀಗ ಅಗ್ನಿ V ಕ್ಷಿಪಣಿಯ ಯಶಸ್ವಿ ಪರೀಕ್ಷೆಯು ಚೀನಾಗೆ ಸ್ಪಷ್ಟ ಎಚ್ಚರಿಕೆಯೆಂದು ಭಾವಿಸಲಾಗುತ್ತಿದೆ.
Agni V missile was spotted at IACS, Jadavpur. Kolkata pic.twitter.com/2hshN9vymj
— silver says (@adventureratma) December 15, 2022
ಕ್ಷಿಪಣಿಯಲ್ಲಿ ಹೊಸ ತಂತ್ರಜ್ಞಾನಗಳು ಮತ್ತು ಉಪಕರಣಗಳನ್ನು ಮೌಲ್ಯೀಕರಿಸಲು ಪರೀಕ್ಷೆಯನ್ನು ನಡೆಸಲಾಗಿದ್ದು, ಈಗ ಅದು ಮೊದಲಿಗಿಂತ ಹಗುರವಾಗಿದೆ. ಅಗತ್ಯ ಬಿದ್ದರೆ ಅಗ್ನಿ V ಕ್ಷಿಪಣಿಯ ವ್ಯಾಪ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಪ್ರಯೋಗವು ಸಾಬೀತುಪಡಿಸಿದೆ ಎಂದು ರಕ್ಷಣಾ ಮೂಲಗಳು ಗುರುವಾರ ತಿಳಿಸಿವೆ.
ಒಡಿಶಾ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆದಿದೆ. ಅಗ್ನಿ V ಯೋಜನೆಯು 12,000-15,000 ಕಿಮೀ ವ್ಯಾಪ್ತಿಯನ್ನು ಹೊಂದಿರುವ ಡಾಂಗ್‌ಫೆಂಗ್-41 ನಂತಹ ಕ್ಷಿಪಣಿಗಳನ್ನು ಹೊಂದಿರುವ ಚೀನಾದ ವಿರುದ್ಧ ಭಾರತದ ಪರಮಾಣು ನಿರೋಧಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಅಗ್ನಿ Vಯು ಚೀನಾದ ಉತ್ತರದವರೆಗಿನ ಭಾಗ ಮತ್ತು ಯುರೋಪ್‌ನ ಕೆಲವು ಪ್ರದೇಶಗಳನ್ನು ಒಳಗೊಂಡಂತೆ ಬಹುತೇಕ ಇಡೀ ಏಷ್ಯಾ ವ್ಯಾಪ್ತಿಯನ್ನು ಗುರಿಯಾಗಿಸಿ ಆಕ್ರಮಣ ಮಾಡಬಲ್ಲದು.












