ತಾಯಂದಿರ ಸಂಸ್ಕಾರದಿಂದಲೇ ಬಲಿಷ್ಟ ಭಾರತ: ವಿಜಯ್ ಕೊಡವೂರು 

ಉಡುಪಿ: ಕೊಡವೂರೂ ವಾರ್ಡ್ ಮಹಿಳಾ ಸಮಿತಿ ವತಿಯಿಂದ ಮಹಿಳಾ ದಿನಾಚರಣೆಯನ್ನು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಸೇವೆ ಸಲ್ಲಿಸುವಂತ ಮಹಿಳೆಯರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಕಾರ್ಯ ನಡೆಯಿತು.

ಈ ಸಂದರ್ಭದಲ್ಲಿ ಕೊಡವೂರು ವಾರ್ಡ್ ನಗರ ಸಭಾ ಸದಸ್ಯರಾದ ವಿಜಯ್ ಕೊಡವೂರು ಮಾತನಾಡಿ ತಾಯಂದಿರ ಸಂಸ್ಕಾರದಿಂದ ಮನೆ ನಿರ್ಮಾಣವಾಗವ ಸಾಧ್ಯತೆ ಇದೆ ತಾಯಿಯಾದವರು ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಯಲ್ಲಿ ಧಾರ್ಮಿಕ ಸಂಗತಿಗಳನ್ನು ವಿಚಾರಗಳನ್ನು ತಿಳಿಸುವಂತದ್ದು ರಾಮಾಯಣ ಮಹಾಭಾರತದ ಪುಟ್ಟ ಪುಟ್ಟ ಕತೆಗಳನ್ನು ತಿಳಿಸಿ ದಿನನಿತ್ಯ ಭಜನೆ ಮಾಡುದರ ಮೂಲಕ ದೇವರಂತಹ ಮಕ್ಕಳನ್ನು ನಿರ್ಮಾಣ ಮಾಡಲು ಸಾಧ್ಯತೆ ಇದೆ ರಾಮನ ಭಜನೆ ಹೇಳುತ್ತಾ ರಾಮನಾಗಿ ಗುಣ ಪರಿವರ್ತನೆಯಾಗಬೇಕು ರಾಮನಂತೆ ಬದುಕಬೇಕು ಸಮಾಜಕ್ಕೆ ಉಪಕಾರಿಯಾಗಬೇಕು, ಇಂತಹ ಸಂಸ್ಕಾರ ತಾಯಿಯಿಂದ ಬರಲು ಸಾಧ್ಯವಿದೆ ಎಂದರು.

ಈ ಸಂದರ್ಬದಲ್ಲಿ ನೀತಾ ಪ್ರಭು (ವಾತ್ಸಲ್ಯ ಟೀಮ್), ಪ್ರೀತಿ ಎಸ್ (ಅಧ್ಯಕ್ಷರು ಬಿಜೆಪಿ ಶಕ್ತಿ ಕೇಂದ್ರ), ಪ್ರೇಮ ಶೇಖರ್ (ಪ್ರಮುಖರು ಕೊಡವೂರು ಮಹಿಳಾ ಸಮಿತಿ), ಚಂದ್ರಾವತಿ (ಪ್ರಮುಖರು ಕೊಡವೂರು ಮಹಿಳಾ ಸಮಿತಿ), ಅಶೋಕ್ ಶೆಟ್ಟಿಗಾರ್ (ಅಧ್ಯಕ್ಷರು ಕೊಡವೂರು ಅಭಿವೃದ್ಧಿ ಸಮಿತಿ), ಚಂದ್ರಕಾಂತ್ ದೇವಾಡಿಗ (ಉದ್ಯಮಿಗಳು ಉಡುಪಿ ವಿಜಯ ಕೊಡವೂರು) ಮಿತೆಷ್ ಕುಮಾರ್ ಸ್ವಾಗತಿಸಿ ವಂದಿಸಿದರು.