ಸ್ಪೇನ್ನ ವೆಲೆನ್ಸಿಯಾದಲ್ಲಿ ನಡೆದ ಉದ್ಘಾಟನಾ ಎಫ್ಐಎಚ್ ನೇಷನ್ಸ್ ಕಪ್ನಲ್ಲಿ ಕ್ಯಾಪ್ಟನ್ ಸವಿತಾ ಪುನಿಯಾ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡವು ಫೈನಲ್ನಲ್ಲಿ ಸ್ಪೇನ್ ಅನ್ನು 1-0 ಗೋಲುಗಳಿಂದ ಸೋಲಿಸಿದೆ. ಭಾರತದ ಗುರ್ಜಿತ್ ಕೌರ್ ಗೆಲುವಿನ ಗೋಲು ದಾಖಲಿಸಿದ್ದಾರೆ. ಉದ್ಘಾಟನಾ ಎಫ್ಐಎಚ್ ನೇಷನ್ಸ್ ಕಪ್ ಸ್ಪೇನ್ನ ವೇಲೆನ್ಸಿಯಾದಲ್ಲಿ ಡಿ.11ರಿಂದ17 ರವರೆಗೆ ನಡೆಯಿತು.
ಕೋವಿಡ್-19 ಸಂಬಂಧಿತ ಸಮಸ್ಯೆಗಳಿಂದಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡ ಪಂದ್ಯದಿಂದ ಹೊರಗುಳಿದ ಬಳಿಕ ಬದಲಿ ತಂಡಗಳಾಗಿ ಭಾರತ ಮತ್ತು ಸ್ಪೇನ್ ನ ಮಹಿಳಾ ಹಾಕಿ ತಂಡಗಳು ಎಫ್ಐಎಚ್ ಪ್ರೊ ಲೀಗ್ 2021-22 ರಲ್ಲಿ ಆಡಿದ್ದವು. ಈ ಗೆಲುವಿನಿಂದಾಗಿ ಜಾನ್ನೆಕೆ ಸ್ಕೋಪ್ಮ್ಯಾನ್ ತರಬೇತುದಾರರಾಗಿರುವ ಭಾರತೀಯ ಮಹಿಳಾ ಹಾಕಿ ತಂಡ ಎಫ್ಐಹೆಚ್ ಪ್ರೊ ಲೀಗ್ 2023-24 ಗೆ ಬಡ್ತಿ ಪಡೆದಿದೆ. ತಂಡದ ಪ್ರತಿಯೊಬ್ಬ ಸದಸ್ಯರಿಗೆ 2 ಲಕ್ಷ ರೂಪಾಯಿ ಮತ್ತು ಎಲ್ಲಾ ಸಹಾಯಕ ಸಿಬ್ಬಂದಿಗೆ ತಲಾ 1 ಲಕ್ಷ ರೂಪಾಯಿ ನಗದು ಬಹುಮಾನವನ್ನು ಹಾಕಿ ಇಂಡಿಯಾ ಘೋಷಿಸಿದೆ.
Huge congratulations 🇮🇳 #WomenPower Celebration after Indian women's hockey team won FIH Nations Cup 2022.v @AskAnshul @khushsundar @Pink @shekharkapur @kiranshaw @ShefVaidya @LizAnnSonders @drtaranarula @tanyadua @CharuPragya pic.twitter.com/GNoi0vAugU
— Ravi Karkara (@ravikarkara) December 20, 2022
ಸೆಮಿಫೈನಲ್ನಲ್ಲಿ ಪೆನಾಲ್ಟಿ ಶೂಟೌಟ್ನಲ್ಲಿ ಐರ್ಲೆಂಡ್ ವಿರುದ್ಧ 2-1 ರೋಚಕ ಜಯ ಸಾಧಿಸುವ ಮೊದಲು ಭಾರತ ತಂಡವು ಚಿಲಿ (3-1), ಜಪಾನ್ (2-1), ಮತ್ತು ದಕ್ಷಿಣ ಆಫ್ರಿಕಾ (2-0) ತಂಡಗಳನ್ನು ಗ್ರೂಪ್ ಹಂತದಲ್ಲಿ ಸೋಲಿಸಿದ್ದು ಈ ಮೂಲಕ ಭಾರತ ಐದು ಪಂದ್ಯಗಳಲ್ಲಿ ಐದು ಗೆಲುವುಗಳ ಪರಿಪೂರ್ಣ ದಾಖಲೆಯೊಂದಿಗೆ ಪಂದ್ಯಾವಳಿಯನ್ನು ಕೊನೆಗೊಳಿಸಿದೆ.