ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ):ತನೇಜಾ ಪ್ರಸ್ತುತ ಮುಖ್ಯ ಲೆಕ್ಕಪತ್ರ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಹೆಚ್ಚುವರಿ ಜವಾಬ್ದಾರಿಯಾಗಿ ಸಿಎಫ್‌ಒ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. ಟೆಸ್ಲಾ ಕಂಪನಿಯಲ್ಲಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಜಕಾರಿ ಕಿರ್ಕ್ಹಾರ್ನ್ ಅವರ ಸ್ಥಾನವನ್ನು ತನೇಜಾ ತುಂಬಲಿದ್ದಾರೆ.
ಎಲೋನ್ ಮಸ್ಕ್ ನೇತೃತ್ವದ ಟೆಸ್ಲಾ ಕಂಪನಿಯು ಭಾರತೀಯ ಮೂಲದ ವೈಭವ್ ತನೇಜಾ ಅವರನ್ನು ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್‌ಒ) ನೇಮಕ ಮಾಡಿದೆ.ಟೆಸ್ಲಾ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿ ಭಾರತ ಮೂಲದ ವೈಭವ್ ತನೇಜಾ ನೇಮಕಗೊಂಡಿದ್ದಾರೆ.
ಟೆಸ್ಲಾ ಭಾರತದಲ್ಲಿ ತನ್ನ ಆಟೋ ಮತ್ತು ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ಉದ್ಯಮ ಆರಂಭಿಸಲು ಭಾರತದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದೆ. ಇದರ ಮಧ್ಯೆ ಭಾರತೀಯ ಮೂಲದ ತನೇಜಾ ಅವರನ್ನು ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಕ ಮಾಡಿರುವುದು ಕುತೂಹಲ ಮೂಡಿಸಿದೆ.”ಈ ಕಂಪನಿಯ ಭಾಗವಾಗಿ ಕೆಲಸ ಮಾಡಿರುವುದು ವಿಶೇಷ ಅನುಭವವಾಗಿದೆ ಮತ್ತು ನಾನು 13 ವರ್ಷಗಳ ಹಿಂದೆ ಕಂಪನಿಗೆ ಸೇರಿದಾಗಿನಿಂದ ನಾವು ಒಟ್ಟಿಗೆ ಮಾಡಿದ ಕೆಲಸದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ” ಎಂದು ಕಿರ್ಕ್ಹಾರ್ನ್ ವೃತ್ತಿಪರ ನೆಟ್ವರ್ಕಿಂಗ್ ಪ್ಲಾಟ್ ಫಾರ್ಮ್ ಲಿಂಕ್ಡ್‌ಇನ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಆಮದು ಮಾಡಿದ ಟೆಸ್ಲಾ ಕಾರುಗಳಿಗೆ ತೆರಿಗೆ ಕಡಿತ ಮಾಡದ ಕಾರಣದಿಂದ ಮಸ್ಕ್ ಈ ಹಿಂದೆ ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ನಿರಾಕರಿಸಿದ್ದರು. ಆದರೆ ಈಗ ಮಸ್ಕ್ ತಮ್ಮ ನಿಲುವು ಬದಲಾಯಿಸಿದ್ದು, ಟೆಸ್ಲಾವನ್ನು ಭಾರತಕ್ಕೆ ತರಲು ಉತ್ಸುಕರಾಗಿದ್ದಾರೆ.ಜೂನ್ನಲ್ಲಿ ಮಸ್ಕ್ ಅವರು ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗ, ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವುದಾಗಿ ಹೇಳಿದ್ದರು. ಮೋದಿ ಅವರೊಂದಿಗಿನ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಸ್ಕ್, “ಮೋದಿಯವರಿಗೆ ಭಾರತದ ಬಗ್ಗೆ ನಿಜವಾಗಿಯೂ ಕಾಳಜಿಯಿದೆ. ಭಾರತದಲ್ಲಿ ಹೂಡಿಕೆ ಮಾಡುವಂತೆ ಅವರು ನಮಗೆ ಮನವಿ ಮಾಡಿದ್ದಾರೆ. ನಾವೂ ಸಹ ಭಾರತದಲ್ಲಿ ಹೂಡಿಕೆ ಆರಂಭಿಸಲು ಬಯಸುತ್ತಿದ್ದೇವೆ ಹಾಗೂ ಇದಕ್ಕಾಗಿ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೇವೆ” ಎಂದು ಹೇಳಿದ್ದರು.












