ಸುನಾಗ್ ಆರ್ಥೋ ಕೇರ್ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಉಡುಪಿ: ಸುನಾಗ್ ಆರ್ಥೋ ಕೇರ್ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತೆಯಲ್ಲಿ 75 ನೇ ಸ್ವಾತಂತ್ಯದ ಅಮೃತ ಮಹೋತ್ಸವವನ್ನು ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ನರೇಂದ್ರ ಕುಮಾರ್ ಹೆಚ್. ಎಸ್ ಮತ್ತು ಡಾ. ವೀಣಾ ನರೇಂದ್ರ ಹೆಚ್ ಇವರ ನೇತೃತ್ವದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶೃಂಗೇರಿ ಜೆ.ಸಿ.ಬಿ.ಎಮ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ, ಪ್ರೊಫೆಸರ್ ರಾಧಾಕೃಷ್ಣ ರಾವ್ ಧ್ವಜಾರೋಹಣ ನೆರವೇರಿಸಿ ರಾಷ್ಟಧ್ವಜದ ಮಹತ್ವವನ್ನು ತಿಳಿಸಿದರು.

ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ನರೇಂದ್ರ ಕುಮಾರ್ ಎಚ್.ಎಸ್ ಸ್ವಾವಲಂಬನೆ ಹಾಗು ಸ್ವಾತಂತ್ರ್ಯದ ಮಧ್ಯೆ ಇರುವ ವ್ಯತ್ಯಾಸ ತಿಳಿಸಿದರು ಹಾಗೂ ಇವೆರಡನ್ನೂ ನಮ್ಮ ಜೀವನದಲ್ಲಿ ಹೇಗೆ ಅಳವಡಿಸಬೇಕು ಎಂಬುದನ್ನು ಹೇಳಿದರು.

ಡಾ. ಶರತ್ ಮಧ್ಯಸ್ಥ, ನಿವೃತ್ತ ಕೆನರಾ ಬ್ಯಾಂಕ್ ಪ್ರಬಂಧಕ ಗೋಪಿನಾಥ್, ಲಾರೆನ್ಸ್ ಹಾಗೂ ಸುನಾಗ್ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ಧರು.

ಕುಮಾರಿ ಸಂಹಿತಾ ಎಚ್. ಎನ್ ಸ್ವಾಗತಿಸಿದರು, ಡಾ. ವೀಣಾ ನರೇಂದ್ರ ಎಚ್ ವಂದಿಸಿದರು.