ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಸ್ಕೌಟ್ಸ್ ಮತ್ತು ಗೈಡ್ಸ್ ದಳದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ವಿಭಿನ್ನ ರೀತಿಯಲ್ಲಿ ಆಚಚರಿಸಲಾಯಿತು.
ಮಕ್ಕಳು ಮನೆಯಲ್ಲಿದ್ದುಕೊಂಡೇ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಯ ಆದೇಶದಂತೆ ವಿಶೇಷವಾಗಿ ಆಚರಿಸಿದ್ದು, ಮಾತ್ರವಲ್ಲದೇ ಕೋವಿಡ್ 19 ಕುರಿತು ಜಾಗೃತಿ ಮೂಡಿಸಿದ್ದಾರೆ.
ಕಬ್ ಬುಲ್ ಬುಲ್, ಸ್ಕೌಟ್ಸ್ ಗೈಡ್ಸ್ ವಿಧ್ಯಾರ್ಥಿಗಳು ಭಾರತ ಭೂಪಟವನ್ನು ರಂಗೋಲಿ ಹಾಕಿ, ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ಕುಟುಂಬದ ಸದಸ್ಯರೂಂದಿಗೆ ಧ್ವಜವನ್ನು ಹಾರಿಸುವ ಮೂಲಕ ಆಚರಿಸಿದ್ದಾರೆ.
ಪ್ರತಿ ಮನೆಯಲ್ಲೂ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿ ಗಳು ರಾಷ್ಟ್ರಗೀತೆ ಯನ್ನು ಹಾಡಿ, ತಮ್ಮ ತಾಲೂಕಿನ ಮತ್ತು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರ ಕುರಿತು ಭಾಷಣ ಮಾಡಿದ್ದಾರೆ. ಜತೆಗೆ ರಾಜ್ಯ ಸಂಸ್ಥೆ ಆಯೋಜಿಸಿದ ರಸಪ್ರಶ್ನೆ ಯಲ್ಲಿ ಭಾಗವಹಿಸಿ, ತಾವೇ ತಯಾರಿಸಿದ ಮಾಸ್ಕ್ ನ್ನು ನೆರೆಹೊರೆಯವರಿಗೆ ನೀಡುವ ಮೂಲಕ ಜಾಗೃತಿ ಮೂಡಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಅಶೀಷ್ ಕಾಮತ್, ಯಶ್ಮಿ, ಅನನ್ಯ , ಶ್ರವಣ್, ಶ್ರೀಷ, ಆಕಾಂಕ್ಷ ಶೆಟ್ಟಿ ಮತ್ತು ಅನೇಕ ವಿಧ್ಯಾರ್ಥಿ ಗಳು ಭಾಗವಹಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಶ್ರೀ ಧರ್ಮಸ್ಧಳ ಮಂಜುನಾಥೇಶ್ವರ ಶಾಲೆ ಬೆಳ್ತಂಗಡಿಯ ಗೈಡ್ ಕ್ಯಾಪ್ಟನ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಯ ಕಾರ್ಯದರ್ಶಿ ಪ್ರಮೀಳಾ ಪೂಜಾರಿ ಮಾರ್ಗದರ್ಶನ ನೀಡುತ್ತಿದ್ದಾರೆ.