ಉಡುಪಿ: ಇಲ್ಲಿನ ಕೃಷ್ಣಮಠ ಪಾರ್ಕಿಂಗ್ ಬೈಲಕೆರೆ ಹೋಟೆಲ್ ಮಥುರದ ಹತ್ತಿರ ಆರಂಭಿಸಿರುವ ಯಶೋದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಪ್ರಧಾನ ಕಚೇರಿಯನ್ನು ಉಡುಪಿ ಸಂಚಾರಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಬ್ದುಲ್ ಖಾದರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕಾನೂನು ಎಲ್ಲರಿಗೂ ಒಂದೇ ಆಗಿದ್ದು ಅದರ ಪರಿಪಾಲನೆ ಮತ್ತು ಶಿಸ್ತು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಉಡುಪಿ ಯಶೋದ ಆಟೋ ಸಂಘದ ಜಿಲ್ಲಾಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಶ್ರೀಮಹಿಷಮರ್ದಿನಿ ಲ್ಯಾಂಡ್ ಲಿಂಕ್ಸ್ ಮಾಲಕರಾದ ಭಾಸ್ಕರ್ ಶೇರಿಗಾರ್, ಪ್ರಶಾಂತ್ ಪೂಜಾರಿ, ಮಹೇಶ್ ಮಲ್ಪೆ, ಗಣೇಶ್ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಂಜಿಬೆಟ್ಟು ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಆಚಾರಿ, ತಾಲ್ಲೂಕು ಅಧ್ಯಕ್ಷ ಹರೀಶ್ ಅಮೀನ್ ವಂದಿಸಿದರು. ದಿವಾಕರ್ ಕಡೆಕಾರು ಕಾರ್ಯಕ್ರಮ ನಿರೂಪಿಸಿದರು.