ಉಡುಪಿ: ಶ್ರೀದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಉಡುಪಿ ಶಾಖೆಯ ಉದ್ಘಾಟನಾ ಸಮಾರಂಭ ಡಿಸೆಂಬರ್ 17ರಂದು ನಡೆಯಲಿದೆ.
ಉಡುಪಿ-ಕಲ್ಸಂಕ ಮುಖ್ಯ ರಸ್ತೆಯ ಶಂಕರನಾರಾಯಣ ದೇವಸ್ಥಾನದ ಸಮೀಪದ ಅಜೇಯ್ ಟವರ್ಸ್ ನಲ್ಲಿ ನಿರ್ಮಿಸಿರುವ ಸೊಸೈಟಿಯ ಉಡುಪಿ ಶಾಖೆಯನ್ನು ಗೋವಾ ಕವಳೇ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಮಠದ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹರಾಜ್ ಅಂದು ಬೆಳಿಗ್ಗೆ 10.30ಕ್ಕೆ ಉದ್ಘಾಟಿಸಲಿದ್ದಾರೆ.
ಉಡುಪಿ ಶಾಸಕ ಕೆ. ರಘುಪತಿ ಭಟ್, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ನಗರಸಭಾ ಸದಸ್ಯೆ ಮಾನಸಿ ಪೈ, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮಣಿಪಾಲ ಆರ್ ಎಸ್ ಬಿ ಸಂಘದ ಅಧ್ಯಕ್ಷ ಗೋಕುಲದಾಸ್ ನಾಯಕ್, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ (ಪ್ರಭಾರ) ಪ್ರವೀಣ್ ಬಿ. ನಾಯಕ್, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕ ಎಂ.ಎಚ್. ವಿಠಲ ಶೇರಿಗಾರ್, ಉಜ್ವಲ್ ಡೆವಲಪರ್ಸ್ ನ ಪ್ರವರ್ತಕ ಪುರುಷೋತ್ತಮ್ ಶೆಟ್ಟಿ, ಗೀತಾಂಜಲಿ ಸಿಲ್ಕ್ಸ್ ನ ಮಾಲೀಕ ರಾಮಕೃಷ್ಣ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶ್ರೀದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಬಿ. ರಾಮಕೃಷ್ಣ ನಾಯಕ್ ಪರ್ಕಳ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ನಾಯಕ್ ನರಸಿಂಗೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.