ಉಡುಪಿ: ಕನ್ನಡ ಸಾಹಿತ್ಯ ಪರಂಪರೆ ಬಹಳ ವಿಶೇಷವಾದ, ವಿಶಿಷ್ಟವಾದ ತನ್ನದೇ ಆದ ವಿಶೇಷ ಸ್ಥಾನಮಾನವನ್ನು ಒಳಗೊಂಡಿದೆ. ಸಾಹಿತ್ಯ ಕ್ಷೇತ್ರದ ವಿಶೇಷ ಅಭಿರುಚಿಯನ್ನು ಮೈಗೂಡಿಸಿಕೊಂಡರೆ ಅದು ನಮ್ಮನ್ನು ಬಹಳ ಎತ್ತರಕ್ಕೆ ಕೊಂಡೊಯ್ಯಬಲ್ಲ ಶಕ್ತಿಯನ್ನು ಹೊಂದಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯ ಸಹಕಾರ್ಯದರ್ಶಿ ಕ.ವೆಂ. ನಾಗರಾಜು ಹೇಳಿದರು.
ಗೊರೂರು ಅನಂತ್ರಾಜ್ ಅಭಾಸಾಪ ಹಾಸನ ಘಟಕದ ಆಶ್ರಯದಲ್ಲಿ ನಡೆದ ಗೊರೂರು ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯ ಅಥಿತಿಗಳಾಗಿ ಅಭಾಕಸಾಪ ರಾಜ್ಯ ಸದಸ್ಯ ಗುರುರಾಜ್ ಕುಂದಾಪುರ, ಹಾಸನ ಘಟಕದ ಸಂಚಾಲಕ ಪ್ರಶಾಂತ್ ಏನ್.ಆರ್, ಮಂಜುನಾಥ್ ಟಿ.ಎನ್. ಗೃಹ ರಕ್ಷಕ ದಳದ ರಾಜು ಪಳನಿಸ್ವಾಮಿ, ಉದ್ಯಮಿ ಸದಾಶಿವ ಶೆಟ್ಟಿ , ಗೊರೂರು ಸುರೇಶ, ಕೃಷ್ಣವೇಣಿ ಶಿಶಿರ್ ಸದಾಶಿವ ಶೆಟ್ಟಿ, ದಾಕ್ಷಾಯಿಣಿ ಮುರುಗನ್, ನಾಗೇಂದ್ರ ಎಚ್.ಎನ್, ರೇಷ್ಮಾ ಸದಾಶಿವ ಶೆಟ್ಟಿ, ವರುಣ,ಕುಮಾರಸ್ವಾಮಿ ಉಡುವಾರೆ ಉಪಸ್ಥಿತರಿದ್ದರು.