ಉಡುಪಿ: ಪೂರ್ವ ಸ್ವಾಮ್ಯದ ಕಾರುಗಳ ವಾಹನ ವಿತರಕರ ಸಂಘದ ನೂತನ ಕಚೇರಿಯ ಉದ್ಘಾಟನೆ ಸೋಮವಾರದಂದು ನೆರವೇರಿತು. ಸದಾಶಿವ ಶೆಟ್ಟಿ ಕಚೇರಿಯನ್ನು ಉದ್ಘಾಟಿಸಿದರು. ಹೆಚ್ ಜಯರಾಜ್ ಕೋಟ್ಯಾನ್ ಮತ್ತು ಅಶ್ರಫ್ ಉಡುಪಿ ಕಾರ್ಸ್ ಇವರು ದೀಪ ಬೆಳಗಿಸಿದರು.
ಕಾರ್ಯಕ್ರಮದಲ್ಲಿ ವಸಂತ ಗಣೇಶ್ ಕಾರ್ಸ್, ಜಿಯಾದ್ ಉಡುಪಿ ಕಾರ್ಸ್, ಪಾಯಸ್ ಕಾರ್ಕಳ, ಪೌಲ್ ಕೆಪಿ ಕಾರ್ಸ್, ಆಲ್ವಿನ್, ಝುನೈದ್ ಟ್ರಕ್ ಪಾಯಿಂಟ್ ಮುಂತಾದವರು ಉಪಸ್ಥಿತರಿದ್ದರು.
ಉದಯ್ ಕಿರಣ್ ವಂದಿಸಿದರು, ರಜಾಕ್ ಮಾಸ್ಟರ್ ನಿರೂಪಿಸಿದರು.