ಉಡುಪಿ: ಏಷಿಯಾ, ಆಫ್ರಿಕಾ, ದಕ್ಷಿಣ ಮತ್ತು ಮಧ್ಯ ಅಮೇರಿಕಾದಂತಹ 42 ದೇಶಗಳಲ್ಲಿ ತನ್ನ ವಿಸ್ತರಣೆಯನ್ನು ಹೊಂದಿರುವ ಹೀರೋ ಮೋಟರ್ ಕಾರ್ಪ್ ಸಂಸ್ಥೆಯು ಇದೇ ಮೊದಲ ಬಾರಿಗೆ ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ತನ್ನ ಪ್ರಪ್ರಥಮ ಶೋರೂಂ ಅನ್ನು ಕರಾವಳಿ ಜಂಕ್ಷನ್ ಬಳಿಯಿರುವ ಶ್ರೀ ರಾಮದರ್ಶನ ಕಟ್ಟಡದಲ್ಲಿ ತೆರೆಯಲಿದ್ದು, ಇದರ ಉದ್ಘಾಟನಾ ಸಮಾರಂಭವು ನ.6 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಶಾಸಕ ರಘುಪತಿ ಭಟ್ ಉದ್ಘಾಟನಾ ಕಾರ್ಯವನ್ನು ನೆರವೇರಿಸಲಿದ್ದಾರೆ ಎಂದು ಹೀರೋ ಮೋಟರ್ ಕಾರ್ಪ್ ನ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕುಮಾರ್ ಟಿ. ಕರ್ನೆ ಹೇಳಿದರು.
ಅವರು ಶುಕ್ರವಾರದಂದು ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಶಿವಮೊಗ್ಗದಲ್ಲಿ ಹೀರೋ ಶಕ್ತಿ ಮೋಟರ್ ಸಂಸ್ಥೆಯ 6 ಕಂಪನಿಗಳಿದ್ದು ಒಟ್ಟು 12 ಜಿಲ್ಲೆಗಳ ಹೀರೋ, ಹೋಂಡಾ, ಟಿವಿಎಸ್, ಸಿಯಾಟ್ ಮುಂತಾದ ಶೋರೂಂಗಳು, ಸಗಟು ಮತ್ತು ಚಿಲ್ಲರೆ ವ್ಯಾಪಾರಸ್ಥರಿಗೆ ಬಿಡಿಭಾಗಗಳು ಮತ್ತು ದ್ವಿಚಕ್ರವಾಹನಗಳನ್ನು ಪೂರೈಸಲಾಗುತ್ತಿದೆ. ತಮ್ಮ ಗಣನೀಯ ಗ್ರಾಹಕ ಸೇವೆ ಮತ್ತು ಬೆಳವಣಿಗೆಯನ್ನು ಗಮನಿಸಿದ ಹೀರೋ ಮೋಟರ್ ಕಾರ್ಪ್ ಸಂಸ್ಥೆಯು ಇದೇ ಮೊದಲ ಬಾರಿಗೆ ಉಡುಪಿಯಲ್ಲಿ ಅಧಿಕೃತ ಶೋರೂಂ ಅನ್ನು ತೆರೆಯಲು ಅವಕಾಶ ನೀಡಿದೆ. ಭಾರತದಲ್ಲಿ ಈಗಾಗಲೇ ಒಟ್ಟು 4 ಶೋರೂಂಗಳಿದ್ದು, 5 ನೇ ಶೋರೂಂ ಅನ್ನು ಉಡುಪಿಯಲ್ಲಿ ತೆರೆಯಲಾಗಿದೆ ಎಂದರು.
ನವೆಂಬರ್ 6 ವರೆಗೆ ಶೋರೂಂ ಗೆ ಭೇಟಿ ನೀಡುವ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳಿದ್ದು, ಶೋರೂಂ ಉದ್ಘಾಟನೆಯಾದ ಬಳಿಕ ನ.6 ರಿಂದ ಡಿ.6 ರವರೆಗೆ ವಾಹನ ಖರೀದಿಸುವವರಿಗೆ ಖಚಿತ ಬಂಪರ್ ಕೊಡುಗೆಗಳಿದ್ದು, ಲಕ್ಕಿ ಡ್ರಾ ಕೂಡಾ ಇದೆ. ಪ್ರಥಮ ಬಹುಮಾನ 1 ಸ್ಪ್ಲೆಂಡರ್ ಬೈಕ್, ದ್ವಿತೀಯ ಬಹುಮಾನ 3 ಎಲ್.ಇ.ಡಿ ಟಿವಿ, ತೃತೀಯ ಬಹುಮಾನ 2 ಚಿನ್ನದ ನಾಣ್ಯ, ನಾಲ್ಕನೇ ಬಹುಮಾನ 20 ಬೆಳ್ಳಿ ನಾಣ್ಯ ಮತ್ತು ಐದು ಮತ್ತು ಆರನೇ ಬಹುಮಾನವಾಗಿ ಕ್ರಮವಾಗಿ 25 ಮೊಬೈಲ್ ಫೋನ್ ಮತ್ತು 50 ಬ್ಲೂ ಟೂಥ್ ಹೆಡ್ ಸೆಟ್ ಗಳು ದೊರೆಯಲಿವೆ.
2000 ಚದರ ಅಡಿಯ ಸಂಪೂರ್ಟ ಡಿಜಿಟಲೀಕೃತ ಶೋರೂಂನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಸೇವೆಯೊಂದಿಗೆ ಹೊಸ ಮಾದರಿಯ ದ್ವಿಚಕ್ರ ವಾಹನಗಳು, ಬಿಡಿ ಭಾಗಗಳು ದೊರೆಯಲಿದ್ದು, 8000 ಚದರ ಅಡಿಯ ಗೋದಾಮಿನಲ್ಲಿ ಬಿಡಿಭಾಗಗಳು ಮತ್ತು ವಾಹನಗಳ ಸರ್ವಿಸಿಂಗ್ ಕೂಡಾ ನಡೆಸಲಾಗುತ್ತದೆ. ಗ್ರಾಹಕರು ಇದರ ಸಂಪೂರ್ಣ ಉಪಯೋಗ ಪಡೆಯಬೇಕು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮ್ಯಾನೇಜರ್ ರಾಹುಲ್ ಮಿರಾಜ್ಕರ್ ಮತ್ತು ಉಡುಪಿಯ ಸಿಎ ಇನ್ಸ್ಟಿಟ್ಯೂಟ್ ನ ಅಧ್ಯಕ್ಷ ಸಿಎ ಲೋಕೇಶ್ ಶೆಟ್ಟಿ ಉಪಸ್ಥಿತರಿದ್ದರು.