ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಇದರ 10 ನೇ ಶಾಖೆ ಉದ್ಘಾಟನೆ; ಸಾಧಕರಿಗೆ ಸನ್ಮಾನ

ಉಡುಪಿ: ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ ನೂತನ ವಾಣಿಜ್ಯ ಸಂಕೀರ್ಣ “ಸಹಕಾರ ಸಿಂಧು” ಹಾಗೂ ಹಂಪನಕಟ್ಟೆ-ಕೆಮ್ಮಣ್ಣಿನಲ್ಲಿ 10ನೇ ಶಾಖೆಯ ಉದ್ಘಾಟನಾ ಸಮಾರಂಭವು ನಡೆಯಿತು.

ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಸ್ಥಳೀಯ ಮಹನಿಯರನ್ನು ಗುರುತಿಸಿ ಗೌರವಿಸಿ, ಅಭಿನಂದಿಸಲಾಯಿತು.

ಬಡ ರೋಗಿಗಳ ಪಾಲಿಗೆ ದೇವರಾದ “ಇಪ್ಪತ್ತು ರೂಪಾಯಿ ಡಾಕ್ಟರ್” ಎಂದೇ ಪ್ರಸಿದ್ಧಿ ಪಡೆದ ಡಾ. ಅಶ್ವಿನಿ ಕುಮಾರ್, ಸರ್ಪ ಸುತ್ತು ಕಾಯಿಲೆಗೆ ಔಷಧಿಯನ್ನು ನೀಡುತ್ತಾ ಸಾವಿರಾರು ಮಂದಿಯನ್ನು ಗುಣ ಪಡಿಸಿದ ವನಜಾ ಆಚಾರ್ಯ, ಸಾಹಸ ಪ್ರವೃತ್ತಿಯಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಈಶ್ವರ ಮಲ್ಪೆ, ಕುಡಿಯುವ ನೀರಿನ ಸಮಸ್ಯೆಯನ್ನು ಮನಗೊಂಡು ಹಲವಾರು ಜಿಲ್ಲೆಗಳಿಗೆ ಭೇಟಿ ನೀಡಿ ಅಂತರ್ಜಲ ಮತ್ತು ನೀರಾವರಿಯ ಬಗ್ಗೆ ಅರಿವು ಮೂಡಿಸಿ ಆ ಕ್ಷೇತ್ರದಲ್ಲಿ ಸೇವೆಗೈದ ಜೋಸೆಫ್ ಜಿ. ಎಂ. ರೆಬೆಲ್ಲೋ, ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ತಮನ್ನು ತಾವು ತೊಡಗಿಸಿಕೊಂಡು ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಪ್ರವೀಣ್ ಗಾಣಿಗ, ಕೆಮ್ಮಣ್ಣು ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ)ದಲ್ಲಿ 15 ವರ್ಷದೊಳಗಿನ ಮಹಿಳಾ ಏಕದಿನ ಕ್ರಿಕೆಟ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ, ಇದೀಗ ರಾಷ್ಟೀಯ ಮಟ್ಟಕ್ಕೆ ಆಯ್ಕೆಯಾಗಿರುವ ಕುಮಾರಿ ಚಿತ್ರ ಇವರೆಲ್ಲರ ಸಾಧನೆಯನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ., ಬೆಂಗಳೂರು ಇದರ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಸಂತ ತೆರೇಸಾ ಚರ್ಚಿನ ಧರ್ಮಗುರುಗಳಾದ ವಂದನೀಯ ರೆ.ಫಾ. ಫಿಲಿಪ್ ನೇರಿ ಆರಾನ್ಹ, ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ, ಕಾಂಚನ ಹೂಂಡೈನ ಎಂ. ಡಿ. ಪ್ರಸಾದ್‌ರಾಜ್ ಕಾಂಚನ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ, ಕ.ರಾ.ಸ. ಮಹಾ ಮಂಡಳ ಬೆಂಗಳೂರಿನ ನಿರ್ದೇಶಕ ಬಿ. ಜಯಕರ ಶೆಟ್ಟಿ ಇಂದ್ರಾಳಿ, ದ.ಕ.ಜಿ.ಕೇ.ಸ. ಬ್ಯಾಂಕ್ ನಿ., ಮಂಗಳೂರು ಹಾಗೂ ಕ.ರಾ.ಸ.ಮಾ.ಮಹಾ ಮಂಡಳ ನಿ., ಬೆಂಗಳೂರು ಇದರ ನಿರ್ದೇಶಕ ಡಾ. ಐ. ದೇವಿಪ್ರಸಾದ್ ಶೆಟ್ಟಿ, ಬಡಾನಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋದ ಆಚಾರ್ಯ, ಉಡುಪಿ ಮತ್ತು ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್. ಎನ್. , ಗಣಪತಿ ವ್ಯವಸಾಯ ಸೇ.ಸ. ಸಂಘ ನಿ., ಕೆಮ್ಮಣ್ಣಿನ ಅಧ್ಯಕ್ಷ ಸತೀಶ್ ಶೆಟ್ಟಿ, ಶ್ರೀ ದು.ಪ.ಅಮ್ಮನವರ ದೇವಸ್ಥಾನ ಸನ್ಯಾಸಿಮಠ ಬಡಾನಿಡಿಯೂರು ಅಧ್ಯಕ್ಷ ಉಮೇಶ್ ಪೂಜಾರಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಟಿ. ಎನ್. ರಹಮತುಲ್ಲಾ, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್. ವಿ, ಬಡಾನಿಡಿಯೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಲತಿ, ಸಂಸ್ಥೆಯ ಅಧ್ಯಕ್ಷ ಅರುಣ ಕುಮಾರ್ ಶೆಟ್ಟಿ, ಪ್ರಧಾನ ವ್ಯವಸ್ಥಾಪಕ ರಾಜೇಶ್ ಹೆಗ್ಡೆ, ಶಾಖಾ ವ್ಯವಸ್ಥಾಪಕ ಸಂದೀಪ ಕೆ. ಶೆಟ್ಟಿ, ಸಂಸ್ಥೆಯ ನಿರ್ದೇಶಕರು, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.