ಗುಂಡಿಬೈಲು: ಐಡಿಯಲ್ ಚಿಕನ್ 20ನೇ ರಿಟೇಲ್ ಮಳಿಗೆ ಶುಭಾರಂಭ

ಉಡುಪಿ: ಕಳೆದ 18 ವರ್ಷಗಳಿಂದ ಕರ್ನಾಟಕ ಮತ್ತು ಕೇರಳದಲ್ಲಿ ಮನೆಮಾತಾಗಿರುವ ಹೆಸರಾಂತ ಕೋಳಿ ಉತ್ಪಾದನಾ ಮತ್ತು ಮಾರಾಟ ಸಂಸ್ಥೆ ಐಡಿಯಲ್ ಚಿಕನ್ ಇದರ 20ನೇ ರಿಟೇಲ್ ಮಳಿಗೆಯು ಗುಂಡಿಬೈಲಿನಲ್ಲಿ ಜ.25 ರಂದು ಶುಭಾರಂಭಗೊಂಡಿತು.

ಉಡುಪಿ ಪೆರಂಪಳ್ಳಿ ಚರ್ಚ್ ನ ಫಾದರ್ ಅನಿಲ್ ಡಿಸೋಜಾ ಅವರು ಆಶೀರ್ವಚನ ನೀಡಿದರು. ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್ ನ ಮಾಲಕ ಡಾ. ಜೆರಿ ವಿನ್ಸೆಂಟ್ ಡಯಾಸ್ ರಿಬ್ಬನ್ ಕತ್ತರಿಸುವ ಮೂಲಕ ಮಳಿಗೆಯನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ನೈನಾ ಫ್ಯಾನ್ಸಿ ಸ್ಟೋರ್ ಮಾಲಕ ಮೊಹಮ್ಮದ್ ಮೌಲ, ನಗರಸಭಾ ಸದಸ್ಯ ಪ್ರಭಾಕರ್ ಪೂಜಾರಿ ಭಾಗವಹಿಸಿದ್ದರು.

ಸಂಸ್ಥೆಯ ಹಿರಿಯ ರೀಟೇಲ್ ವ್ಯವಸ್ಥಾಪಕ ಕಿರಣ್ ಕುಮಾರ್ ಕೆ ಸ್ವಾಗತಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ನಾಸಿರ್ ವಂದಿಸಿದರು. ಎಚ್.ಆರ್ ಮ್ಯಾನೇಜರ್ ಕಿರಣ್ ಕುಮಾರ್ ಹೆಚ್ ನಿರೂಪಿಸಿದರು.

ಇನ್ನು ಕೆಲವೇ ದಿನಗಳಲ್ಲಿ ನಗರದ ಪಿಪಿಸಿ ಕಾಲೇಜ್ ಬಳಿಯಿರುವ ಮೀನು ಮಾರುಕಟ್ಟೆಯ ಬಳಿ ಇನ್ನೊಂದು ಶಾಖೆಯು ಪ್ರಾರಂಭವಾಗಲಿದೆ.

ಐಡಿಯಲ್ ಚಿಕನ್ ಸಂಸ್ಥೆಯ ವಿಶಿಷ್ಟ ಸೇವೆ

ಐಡಿಯಲ್ ಚಿಕನ್ ಅನ್ನು ಐಡಿಯಲ್ ಚಿಕನ್ ಅಪ್ಲಿಕೇಷನ್ ನಲ್ಲಿ ಆರ್ಡರ್ ಮಾಡಿ ಅಥವಾ ಟೋಲ್ ಫ್ರೀ ಸಂಖ್ಯೆ 08047187427 ಗೆ ಕರೆ ಮಾಡಿ ಮನೆ ಬಾಗಿಲಿಗೆ ಡೆಲಿವರಿ ಪಡೆಯಬಹುದಾಗಿದೆ.