ದೇಶ: ಹ್ಯುಂಡೈ ಕಂಪನಿಯ ಬಹುನಿರೀಕ್ಷಿತ ಕೋನಾ ಎಲೆಕ್ಟ್ರಿಕ್ ಕಾರು ನಾಳೆ (ಜುಲೈ 9) ಬಿಡುಗಡೆಯಾಗುತ್ತಿದೆ. ಜುಲೈ 9 ರಿಂದಲೇ ಈ ಕೋನಾ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದೆ.
ಈ ಕೋನಾ ಕಾರಿನ ಸ್ಪೆಷಾಲಿಟಿ ಅಂದ್ರೆ ಒಂದು ಬಾರಿ ಚಾರ್ಜ್ ಮಾಡಿದರೆ 452 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ನಾಳೆ ಬಿಡುಗಡೆಯಾಗಲಿರುವ ಹಾಗೂ ಲಭ್ಯವಿರುವ ಎಲೆಕ್ಟ್ರಿಕ್ ಕಾರುಗಳ ಪೈಕಿ ಗರಿಷ್ಠ ಮೈಲೇಜ್ ಅನ್ನೋ ಹೆಗ್ಗಳಿಕೆ ಕೋನಾದ್ದು.
ಫೀಚರ್ ಏನ್ ಗೊತ್ತಾ:
ಹ್ಯುಂಡೈ ಕೋನಾದಲ್ಲಿ 2 ವೇರಿಯೆಂಟ್ ಲಭ್ಯವಿದೆ. 39.2 kWh ಬ್ಯಾಟರಿ ಕೋನಾ ಹಾಗೂ 64 kWh ಬ್ಯಾಟರಿ ಚಾಲಿತ ಎಂಜಿನ್ ಲಭ್ಯವಿದೆ. 39.2 kWh ಬ್ಯಾಟರಿ ಚಾಲಿತ ಕೋನಾ ಕಾರು 312 ಕಿ.ಮೀ ಮೈಲೇಜ್ ರೇಂಜ್ ನೀಡಿದರೆ, 64 kWh ಬ್ಯಾಟರಿ ಚಾಲಿತ ಕೋನಾ ಕಾರು 452 ಕಿ.ಮೀ ಮೈಲೇಜ್ ನೀಡಲಿದೆ. ಕೋನಾ ಕಾರಿನ ಬೆಲೆ 20 ರಿಂದ 25 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.