ಕುಂದಾಪುರ: ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಕೋಟೇಶ್ವರ ಘಟಕದ ನೇತೃತ್ವದಲ್ಲಿ ಅಭಯಹಸ್ತ ಹೆಲ್ಪ್ ಲೈನ್ ಉಡುಪಿ, ರೋಟರಿ ಕ್ಲಬ್ ತೆಕ್ಕಟ್ಟೆ, ಹೆಲ್ಪಿಂಗ್ ಹ್ಯಾಂಡ್ ಕುಂದಾಪುರ, ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ, ಕುಂದಾಪುರ ಇವರ ಜಂಟಿ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಭಾನುವಾರ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಮೊಗವೀರ ಯುವ ಸಂಘಟನೆ ರಿ ಉಡುಪಿ ಜಿಲ್ಲಾಧ್ಯಕ್ಷ ಶಿವರಾಮ ಕೆ.ಎಂ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ, ಮಾತನಾಡಿ ಸಾಮಾನ್ಯವಾಗಿ ರಸ್ತೆ ಅಪಘಾತದಲ್ಲಿ ರಕ್ತಸ್ರಾವಗೊಂಡ ರೋಗಿಗಳು ಮತ್ತು ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಇಂಥ ಸಂದರ್ಭದಲ್ಲಿ ರಕ್ತದಾನಿಗಳು ನೀಡುವ ರಕ್ತ ಮಹತ್ವ ಪಡೆಯುತ್ತದೆ. ವೈದ್ಯಕೀಯ ತಜ್ಞರ ಪ್ರಕಾರ ಒಬ್ಬರ ರಕ್ತದಾನದಿಂದ ಮೂರು ಜನರ ಪ್ರಾಣ ಉಳಿಸಬಹುದಾಗಿದೆ ಎಂದರು.
ಭಾರತೀಯ ರೆಡ್‍ಕ್ರಾಸ್ ಸೊಸೈಟಿ ಕುಂದಾಪುರ ಇದರ ಚೇರ್‍ಮನ್ ಎಸ್ ಜಯಕರ ಶೆಟ್ಟಿ ಮಾತನಾಡಿ, ನಾವೆಲ್ಲರು ಒಂದೆ, ನಮ್ಮೆಲ್ಲರ ನರಗಳಲ್ಲಿ ಹರಿಯುತ್ತಿರುವ ರಕ್ತವು ಒಂದೆ, ಹಿಂಗಿರುವಾಗ ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ಸ್ವಯಂ ಪ್ರೇರಿತನಾಗಿ ರಕ್ತದಾನ ಮಾಡಿದರೆ, ಮಾನವೀಯ ಸಮಾಜ ಕಾಣಲು ಸಾಧ್ಯ ಎಂದರು.
ಮೊಗವೀರ ಯುವ ಸಂಘಟನೆಯ ಕೋಟೇಶ್ವರ ಘಟಕದ ಅಧ್ಯಕ್ಷ ಸುನಿಲ್ ಬಿ ನಾಯ್ಕ್ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿದ್ದರು.
ಅಭಯಹಸ್ತ ಹೆಲ್ಪ್ ಲೈನ್ ಉಡುಪಿ ಅಧ್ಯಕ್ಷ ಸತೀಶ್ ಸಾಲಿಯಾನ್, ರೋಟರಿ ಕ್ಲಬ್ ತೆಕ್ಕಟ್ಟೆ ಅಧ್ಯಕ್ಷ ಮಂಜುನಾಥ ಕಾಂಚನ್, ಜೈ ಕುಂದಾಪ್ರ ಸೇವಾ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಜಯರಾಜ್ ಪಡುಕೆರೆ, ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಗೌರವ ಸಲಹೆಗಾರ ರವೀಂದ್ರ ರಟ್ಟಾಡಿ, ಮೊಗವೀರ ಮಹಾಜನ ಸಂಘ ಶಿವಮೊಗ್ಗ ಉಪಾಧ್ಯಕ್ಷ ರಾಮ ಕುಂದರ್ ಮೊಗಬೆಟ್ಟು, ಮೊಗವೀರ ಯುವ ಸಂಘಟನೆಯ ಕೋಟೇಶ್ವರ ಘಟಕದ ಸ್ಥಾಪಕಾಧ್ಯಕ್ಷ ಸತೀಶ್ ಎಂ ನಾಯ್ಕ್, ಜೇಸಿಐ ವಲಯ 15ರ ವಲಯ ಸಂಯೋಜಕ ಅಶೋಕ್ ತೆಕ್ಕಟ್ಟೆ, ಮೊಗವೀರ ಸಂಘಟನೆಯ ಕೋಟೇಶ್ವರ ಘಟಕದ ನಿಕಟಪೂರ್ವಾಧ್ಯಕ್ಷ ರವೀಶ್ ಎಸ್ ಕೊರವಡಿ ಶಿಬಿರದ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.