ಕಾರ್ಕಳ: ಹೋಟೆಲ್ ರಾಮ್ ಭರೋಸ ಪುನರಾರಂಭ

ಕಾರ್ಕಳ: ಆನೆಕೆರೆಯ ಶ್ರೀ ಕೃಷ್ಣ ದೇವಸ್ಥಾನದ ಜಂಕ್ಸನ್ ಬಳಿ 55ವರ್ಷ ಇತಿಹಾಸವುಳ್ಳ ಹೋಟೆಲ್ ರಾಮ್ ಭರೋಸ ನವೀಕೃತಗೊಂಡು ನವರಾತ್ರಿಯ ಪ್ರಾರಂಭದಂದು ಶುಭರಾಂಭಗೊಂಡಿದೆ.

ಕಾರ್ಕಳದ ಶಿವ ಎಡ್ವಟೈಸರ್ಸ್ ಮಾಲಕ ವರದರಾಯ ಪ್ರಭು ದೀಪ ಬೆಳಗಿಸಿ ಶುಭ ಹಾರೈಸಿದರು.

ಸಮಾರಂಭದಲ್ಲಿ ವೇದಮೂರ್ತಿ ಗಣಪತಿ ಭಟ್, ವಿಠಲ್ ದೇವಾಡಿಗ, ಕುಚೇಲ, ಸುರೇಂದ್ರ ಉಪಸ್ಥಿತರಿದ್ದು ಶುಭಹಾರೈಸಿದರು.

ಮಾಲಕ ಅನಂತ ಪ್ರಭು ಸ್ವಾಗತಿಸಿದರು. ಮಂಜುಳ ಪ್ರಭು ದನ್ಯವಾದ ಅರ್ಪಿಸಿದರು.