ಉಡುಪಿ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆ ಹೊನ್ನೂರು ಗ್ರಾಮದ ತಬಸುಮ್ ಅಲಿಯಾಸ್ ಹೀನಾ ಶಬಾನಾ ಎನ್ನುವ ಮಹಿಳೆ ಗೆ ಇನ್ನೂ ಅನೇಕ ಹೆಸರುಗಳಿವೆ ಎನ್ನಲಾಗಿದೆ. ಈಕೆ ಸುಳ್ಳು ಹೇಳಿ ಅನೇಕ ಯುವಕರೊಂದಿಗೆ ಸ್ನೇಹ ಸಂಪಾದಿಸಿಕೊಂಡು ಮದುವೆಯ ಹೆಸರಲ್ಲಿ ಹಣ ಲೂಟಿ ಮಾಡಿ ಗಂಡಸರ ಸಂಸಾರದ ಜೊತೆ ಚೆಲ್ಲಾಟ ಆಡುವುದರಲ್ಲಿ ಎತ್ತಿದ ಕೈ.
ಇಷ್ಟೇ ಅಲ್ಲದೆ, ಅಲ್ಪಸಂಖ್ಯಾತರ ಯೋಜನೆಗಳ ಅಡಿಯಲ್ಲಿ ಸಾಲ ದೊರಕಿಸಿಕೊಡುತ್ತೇನೆಂದು ನಂಬಿಸಿ ಕೋಟಿಗಟ್ಟಲೆ ಹಣ ಕೊಳ್ಳೆ ಹೊಡೆದಿರುವ ಆರೋಪವೂ ಈಕೆಯ ಮೇಲಿದೆ. ಈಕೆಯನ್ನು ಹೊಸಕೋಟೆ ಪೊಲೀಸರು ಉಡುಪಿಯಲ್ಲಿ ಬಂಧಿಸಿದ್ದಾರೆ.
ಹೊಸಕೋಟೆ ತಾಲೂಕಿನಾದ್ಯಂತ ಮದುವೆ ಹೆಸರಿನಲ್ಲಿ ಯುವಕರಿಗೆ ಮೋಸ ಮಾಡಿರುವ ಹಾಗೂ ಸರ್ಕಾರಿ ಕೆಲಸ ಕೊಡಿಸುತ್ತೇನೆ, ಅಲ್ಪಸಂಖ್ಯಾತರ ಯೋಜನೆಯಡಿಯಲ್ಲಿ ಸಾಲ ಕೊಡಿಸುತ್ತೇನೆಂದು ಲಕ್ಷಾಂತರ ರೂ ಪೀಕಿಸಿರುವ ಆರೋಪದ ಹಿನ್ನೆಲೆಯಲ್ಲಿ ಕೋರ್ಟ್ ಈಕೆಯ ಬಂಧನಕ್ಕೆ ಆದೇಶ ನೀಡಿತ್ತು. ಅದರಂತೆ ಹೊಸಕೋಟೆ ಪೊಲೀಸರು ಗುರುವಾರ ರಾತ್ರಿ ಈಕೆಯನ್ನು ಬಂಧಿಸಿದ್ದಾರೆ.












