ಹಿರಿಯಡಕ: ಸರಣಿ ಅಪಘಾತ- ಸ್ಕೂಟರ್ ಜಖಂ

ಉಡುಪಿ: ಸ್ಕೂಟಿ, ಬೈಕ್, ರಿಕ್ಷಾ ಹಾಗೂ ಇನ್ನೋವಾ ನಡುವೆ ಸರಣಿ ಅಪಘಾತ ನಡೆದ ಘಟನೆ ಬುಧವಾರ ಬೆಳಿಗ್ಗೆ ಹಿರಿಯಡಕದಲ್ಲಿ ಸಂಭವಿಸಿದೆ.

ಅಪಘಾತದಲ್ಲಿ ಸ್ಕೂಟಿ ಸಂಪೂರ್ಣ ಜಖಂಗೊಂಡಿದ್ದು, ಬೈಕ್, ರಿಕ್ಷಾ ಹಾಗೂ ಇನೋವಾಗೆ ಹಾನಿಯಾಗಿದೆ. ಸವಾರರಿಬ್ಬರು ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.