ಉಡುಪಿ: ಪ್ರೀ ಓನಡ್ ವೆಹಿಕಲ್ ಡೀಲರ್ಸ್ ಅಸೋಸಿಯೇಶನ್ ಉಡುಪಿ ಹಾಗೂ ಯುಸಿ ಡೆವಲಪರ್ಸ್ ವತಿಯಿಂದ 1000ಕ್ಕೂ ಮಿಕ್ಕಿ ಹಣ್ಣು ಹಂಪಲಿನ ಗಿಡಗಳ ಉಚಿತ ವಿತರಣೆ ಹಾಗೂ ನೆಡುವ ಕಾರ್ಯಕ್ರಮದ ಉದ್ಘಾಟನೆಯು ಜೂ.22 ರಂದು ಹಿರಿಯಡ್ಕ ಡಿಗ್ರಿ ಕಾಲೇಜ್, ಮುಖ್ಯ ರಸ್ತೆಯ ಬಳಿ ನಡೆಯಿತು.
ಕಾರ್ಯಕ್ರಮದ ಉದ್ಘಾಟಿಸಿದ ಭಾರತ ಸರ್ಕಾರದ ಕೇಂದ್ರ ಜಾಗೃತ ಆಯೋಗ (ಸಿವಿಸಿ) ಕರ್ನಾಟಕ ಮತ್ತು ಗೋವಾ ವಿಭಾಗದ ಹೆಚ್ಚುವರಿ ಆಯುಕ್ತರಾದ ಡಾ. ಸಾಗರ್ ದೇಶಪಾಂಡೆ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರ ಮತ್ತು ಸಾಮಾಜಿಕ ಜಾಗೃತಿ ಬೆಳೆಯಲು ಕನ್ನಡ ಮಾಧ್ಯಮದ ಪಾತ್ರ ದೊಡ್ಡದಿದೆ.ನಾನೂ ಕನ್ನಡದ ಶಾಲೆಯಲ್ಲಿಯೇ ಕಲಿತು ಅಧಿಕಾರಿಯಾಗಿದ್ದೇನೆ. ಇಚ್ಛಾಶಕ್ತಿಯಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂದರು.ಮತ್ತು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಅಭಿಲಾಶ್ ಎಸ್ ಬಿ, ಡೆಪ್ಯೂಟಿ ರೇಂಜ್ ಫಾರೆಸ್ಟ್ ಆಫೀಸರ್, ಮಂಜುನಾಥ್ ಭಟ್ ಪ್ರಾಂಶುಪಾಲರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ, ಸಂತೋಷ್ ಶೆಟ್ಟಿ ಹಿರಿಯ ಮೋಟಾರು ವಾಹನಗಳ ನಿರೀಕ್ಷಕ ಹಾಗೂ ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ, ಸಂತೋಷ್ ಜೋಗಿ ಪಿ.ಡಿ.ಒ ಬೊಮ್ಮರಬೆಟ್ಟು, ವಿಟ್ಟಲ್ ಪಿಎಸ್ಐ ಹಿರಿಯಡಕ, ಉದಯ ಕಿರಣ್, ಕಾರ್ಯದರ್ಶಿ, ಪ್ರೀ ಓನಡ್ ವೆಹಿಕಲ್ ಡೀಲರ್ಸ್ ಅಸೋಸಿಯೇಶನ್ ಹಾಗೂ ಚಿತ್ರಕಲಾ ಶಿಕ್ಷಕ ಮೋಹನ್ ಕಡಬ ಇವರು ಕಾರ್ಯಕ್ರಮ ಶುಭ ಹಾರೈಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಲಾಯಿತು, ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು. ಹಣ್ಣು ಹಂಪಲಿನ ಗಿಡಗಳನ್ನು ಉಚಿತವಾಗಿ ವಿತರಿಸಿ, ನೆಡಲಾಯಿತು.
“ಉಡುಪಿ ಪ್ರೀ-ಓನ್ಡ್ ಡೀಲರ್ಸ್ ಅಸೋಸಿಯೇಶನ್ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಅಶ್ರಫ್ ಸ್ವಾಗತಿಸಿದರು. ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು.























