ಉಡುಪಿ: ಹಿರಿಯಡ್ಕದ ಬೊಮ್ಮರಬೆಟ್ಟು ಗ್ರಾಮದ ಯುವತಿ ಸ್ವಾತಿ ಕರ್ಕೇರಾ (28)ಇವರು ಸಂಕೀರ್ಣವಾದ ಹೊಟ್ಟೆಯ ಗೆಡ್ಡೆ (ಆಂಜಿಯೋಮಿಯೊಲಿಪೋಮಾ) ದಿಂದ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಜೀವನ್ಮರಣ ಹೋರಾಟ ನಡೆಸುತ್ತಿದ್ದು ಇವರ ಚಿಕಿತ್ಸೆಗೆ ಆರ್ಥಿಕ ನೆರವು ಬೇಕಾಗಿದೆ ಎಂದು ಕುಟುಂಬ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ.
ಸ್ವಾತಿ ಅವರ ಗಂಭೀರ ಸ್ಥಿತಿಗೆ ನಿರಂತರ ಚಿಕಿತ್ಸೆ ಅಗತ್ಯವಿದೆ. ಅವರ ವೈದ್ಯಕೀಯ ವೆಚ್ಚವಾಗಿ ಈಗಾಗಲೇ ರೂ.10,00,000 ಕ್ಕೂ ಹೆಚ್ಚು ಖರ್ಚು ಮಾಡಿರುವ ಅವರ ಕುಟುಂಬವು ಮುಂದಿನ ಚಿಕಿತ್ಸೆ ವೆಚ್ಚ ಬರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿಮ್ಮ ಆರ್ಥಿಕ ನೆರವಿನ ಆರೈಕೆ ಅವರ ಜೀವ ಉಳಿಸಲು ಬೇಕಾಗಿದೆ.
ಸ್ವಾತಿ ಕರ್ಕೇರಾ, ಡಿ/ಒ ರಮೇಶ್ ಕರ್ಕೇರಾ. ಶ್ರೀ ಧರ್ಮಶ್ರೀ ನಿಲಯ ಪದ್ಯಂ ಪಡುಬಾಗ್. ಬೊಮ್ಮರಬೆಟ್ಟು ಗ್ರಾಮ. ಹಿರಿಯಡ್ಕ-576113. ಅವರ ಜೀವ ಉಳಿಸುವ ಸಲುವಾಗಿ ಆರ್ಥಿಕ ನೆರವನ್ನು ದೇಣಿಗೆ ರೂಪದಲ್ಲಿ ನೇರವಾಗಿ ವರ್ಗಾಯಿಸಲು QR ಕೋಡ್ ಸ್ಕ್ಯಾನ್ ಮಾಡಿ:
ಹೆಸರು: ಸ್ವಾತಿ ಕರ್ಕೇರ
ಬ್ಯಾಂಕ್: ಕೆನರಾ ಬ್ಯಾಂಕ್
ಖಾತೆ ಸಂಖ್ಯೆ: 01482210023003 IFSC ಕೋಡ್: CNRB0010148

















