ಹಿರಿಯಡಕ: ಮರದಿಂದ ಕೆಳಗೆ ಬಿದ್ದು ವ್ಯಕ್ತಿ ಮೃತ್ಯು.

ಹಿರಿಯಡಕ: ಮರದಿಂದ ಅಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಪೆರ್ಣಂಕಿಲ ಎಂಬಲ್ಲಿ ನಡೆದಿದೆ.

ಮೃತರನ್ನು ಪೆರ್ಣಂಕಿಲ ಗ್ರಾಮದ ಸದಾನಂದ ನಾಯಕ್(61) ಎಂದು ಗುರುತಿಸಲಾಗಿದೆ.

ಇವರು ನ.19ರಂದು ತೋಟದಲ್ಲಿನ ಗಿಡಮರಗಳಿಗೆ ಗೊಬ್ಬರ ಹಾಕಲು ಸೊಪ್ಪು ಕಡಿಯಲು ತೋಟದಲ್ಲಿದ್ದ ಮಾವಿನ ಮರವನ್ನು ಹತ್ತಿದ್ದು, ಮರದಲ್ಲಿ ಸೊಪ್ಪು ಕಡಿಯುತ್ತಿದ್ದಾಗ ಅವರು ಕಾಲು ಜಾರಿ ಆಕಸ್ಮಿಕವಾಗಿ ಕೆಳಗೆ ಬಿದ್ದರೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ನ.22ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.