ಉತ್ತರ ಪ್ರದೇಶ: ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ಯೋಗಿ ಸೂಚನೆ!

ಉತ್ತರ ಪ್ರದೇಶ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಅಕ್ರಮ ವಲಸಿಗರ ವಿರುದ್ಧ ತ್ವರಿತ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ, ರಾಷ್ಟ್ರೀಯ ಭದ್ರತೆ ಮತ್ತು ಸಾಮಾಜಿಕ ಸಾಮರಸ್ಯ ಪ್ರಮುಖ ಆದ್ಯತೆಗಳಾಗಿದ್ದು, ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಯನ್ನು ಸಹಿಸಲಾಗುವುದಿಲ್ಲ ಎಂದು ಸಿಎಂ ಆದೇಶದಲ್ಲಿ ಹೇಳಿದ್ದಾರೆ. ‘ಪ್ರತಿಯೊಂದು ಜಿಲ್ಲಾಡಳಿತ ತಮ್ಮ ಪ್ರದೇಶದಲ್ಲಿ ವಾಸಿಸುವ ಅಕ್ರಮ ವಲಸಿಗರ ಗುರುತಿಸುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು […]
ಮಣಿಪಾಲ: ಗಾಂಜಾ ಮಾರಾಟ – ಇಬ್ಬರು ವಿದ್ಯಾರ್ಥಿಗಳಿಂದ ಬಂಧನ

ಮಣಿಪಾಲ: ಇಲ್ಲಿನ ಎರಡು ವಸತಿಗೃಹಗಳಿಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿ ಸುಮಾರು 36 ಸಾವಿರ ರೂ. ಮೌಲ್ಯದ 727 ಗ್ರಾಂ ಗಾಂಜಾ ಹಾಗೂ 30 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಗುಜರಾತ್ ಮೂಲದ ಕುಶ್‌ಕೆಯುಶ್ ಪಟೇಲ್ (20) ಹಾಗೂ ಉತ್ತರ ಪ್ರದೇಶದ ದೇವಾಂಶ್ ತ್ಯಾಗಿ (22) ಬಂಧಿತರು. ಆರೋಪಿಗಳು ಗಾಂಜಾವನ್ನು ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಶೇಖರಿಸಿ ಇಟ್ಟಿದ್ದರು. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯಡಕ: ಮರದಿಂದ ಕೆಳಗೆ ಬಿದ್ದು ವ್ಯಕ್ತಿ ಮೃತ್ಯು.

ಹಿರಿಯಡಕ: ಮರದಿಂದ ಅಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಪೆರ್ಣಂಕಿಲ ಎಂಬಲ್ಲಿ ನಡೆದಿದೆ. ಮೃತರನ್ನು ಪೆರ್ಣಂಕಿಲ ಗ್ರಾಮದ ಸದಾನಂದ ನಾಯಕ್(61) ಎಂದು ಗುರುತಿಸಲಾಗಿದೆ. ಇವರು ನ.19ರಂದು ತೋಟದಲ್ಲಿನ ಗಿಡಮರಗಳಿಗೆ ಗೊಬ್ಬರ ಹಾಕಲು ಸೊಪ್ಪು ಕಡಿಯಲು ತೋಟದಲ್ಲಿದ್ದ ಮಾವಿನ ಮರವನ್ನು ಹತ್ತಿದ್ದು, ಮರದಲ್ಲಿ ಸೊಪ್ಪು ಕಡಿಯುತ್ತಿದ್ದಾಗ ಅವರು ಕಾಲು ಜಾರಿ ಆಕಸ್ಮಿಕವಾಗಿ ಕೆಳಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ನ.22ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ. ಈ […]
ಉಡುಪಿ: ನಾಪತ್ತೆಯಾಗಿದ್ದ 14 ವರ್ಷ ಬಾಲಕನನ್ನು ಪತ್ತೆ ಮಾಡಿದ ಕೊಂಕಣ ರೈಲ್ವೆ ಸಿಬ್ಬಂದಿ.

ಉಡುಪಿ: ವಾಸ್ಕೋದಿಂದ ನಾಪತ್ತೆಯಾಗಿದ್ದ 14 ವರ್ಷ ಬಾಲಕನೊಬ್ಬನನ್ನು ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ಜನರಲ್ ಕೋಚ್ ನಲ್ಲಿ ಮುಖ್ಯ ಟಿಕೇಟ್ ಪರೀಕ್ಷಕ ಪತ್ತೆ ಹಚ್ಚಿದ ಘಟನೆ ನ.20ರಂದು ಕೊಂಕಣ ರೈಲ್ವೆಯಲ್ಲಿ ವರದಿಯಾಗಿದೆ. ರೈಲು ನಂ. 12619 ಮತ್ಸ್ಯಗಂಧ ಎಕ್ಸ್‌ಪ್ರೆಸ್‌ನ ಜನರಲ್ ಕೋಚ್ ನಲ್ಲಿ 14 ವರ್ಷ ಪ್ರಾಯದ ಬಾಲಕನೊಬ್ಬ ಶಾಲಾ ಸಮವಸ್ತ್ರದಲ್ಲಿ ಶಾಲಾ ಬ್ಯಾಗ್ನೊಂದಿಗೆ ಟಿಕೇಟ್ ಇಲ್ಲದೇ ಪ್ರಯಾಣಿಸುತ್ತಿರುವುದನ್ನು ಟಿಕೇಟ್ ತಪಾಸಣೆ ವೇಳೆ ಪತ್ತೆ ಹಚ್ಚಿದ ಮುಖ್ಯ ಟಿಕೇಟ್ ಪರೀಕ್ಷಕ ಪ್ರದೀಪ್ ಶ್ರೀಕೆ, ಆತನೊಂದಿಗೆ ನಯವಾಗಿ ಮಾತನಾಡಿ ಎಲ್ಲಾ […]