ಮುಂಬೈ: ನವರಾತ್ರಿ, ದೀಪಾವಳಿ ಸಹಿತ ಸಾಲು ಸಾಲು ಹಬ್ಬದ ಪ್ರಯಕ್ತ ವಾಹನ ಉತ್ಪಾದಕ ಸಂಸ್ಥೆಗಳು ನೂತನ ವಾಹನಗಳನ್ನು ಪರಿಚಯಿಸುತ್ತಿದೆ. ಅದರಂತೆ ಹೀರೋ ಸಂಸ್ಥೆ ಸ್ಪ್ಲೆಂಡರ್ ಪ್ಲಸ್ ಕಪ್ಪು ಬಣ್ಣದ ಬೈಕ್ ಅನ್ನು ಬಿಡುಗಡೆ ಮಾಡಿದ್ದು, ನೂತನ ಬೈಕ್ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸಿಗುತ್ತಿದೆ.
ನೂತನ ಸ್ಪ್ಲೆಂಡರ್ ಪ್ಲಸ್ ಬೈಕ್ 97.2 ಸಿಸಿ ಏರ್ಕೂಲ್ಡ್ ಎಂಜಿನ್ ಹೊಂದಿದೆ. 4 ಸ್ಪೀಡ್ ಗೇರ್ ಬಾಕ್ಸ್, 7.9ಹೆಚ್ಪಿ ಪವರ್ ಹಾಗೂ 8.05ಎನ್ಎಮ್ ಟಾರ್ಕ್ ಉತ್ಪಾದಿಸುತ್ತದೆ. ಟ್ಯೂಬ್ಲೆಸ್ ಟಯರ್ ಆಯ್ಕೆಯಲ್ಲಿ ಗ್ರಾಹಕರ ಖರೀದಿಗೆ ಸಿಗಲಿದೆ.
ಶೋ ರೂಮ್ ಬೆಲೆ:
ಕಿಕ್ ಸ್ಟಾರ್ಟ್ ಸ್ಲ್ಪಂಡರ್ ಬೈಕ್ ಬೆಲೆ ₹ 60,960
ಸೆಲ್ಫ್ ಸ್ಟಾರ್ಟ್ ಬೈಕ್ ಬೆಲೆ ₹ 63,260
ಸೆಲ್ಫ್ ಸ್ಟಾರ್ಟ್ i3s ಬೆಲೆ ₹ 64,470