ನಾಟ್ಕದೂರು ಕಟ್ಟಿ ರಾಷ್ಟ್ರ ರಂಗಭೂಮಿಯ ಚಿತ್ತ ತನ್ನತ್ತ ಸೆಳೆದ ಕಲಾವಿದ ಸುಕುಮಾರ್ ಮೋಹನ್ ಕತೆ ಒಮ್ಮೆ ಕೇಳಿ!

ರಂಗಭೂಮಿಯ ಸೆಳೆತಕ್ಕೊಳಗಾಗಿ, ಆ ರಂಗದಲ್ಲಿ ಸಾಧಿಸುವ ಮಿಡಿತ ಮನದೊಳಗೆ ತುಡಿತವಾಗಿ ಬಿಟ್ಟರೆ, ರಾಜ್ಯ,ದೇಶ-ಭಾಷೆಗಳನ್ನು ಮೀರಿ ಅದ್ಭುತವಾಗಿ ಬೆಳೆಯಬಹುದೆಂಬುವುದಕ್ಕೆ ಈ ಕಲಾವಿದ ಸಾಕ್ಷಿ. ಪುಟ್ಟ ಊರು ಮುದ್ರಾಡಿಯಲ್ಲಿ ರಂಗಭೂಮಿ ಕಲಾಸಂಘಟನೆ ಕಟ್ಟಿ ಮುದ್ರಾಡಿ ಅನ್ನೋ ಊರನ್ನು ನಾಟ್ಕದೂರಾಗಿ ಪರಿವರ್ತಿಸಿದ ಕಲಾವಿದ ಸುಕುಮಾರ್ ಮೋಹನ್ ಅವರ ಕತೆಯಿದು. ಹೈದರಾಬಾದ್, ತಮಿಳುನಾಡು, ಮಹಾರಾಷ್ಟ್ರ, ಅಸ್ಸಾಂ, ಮಧ್ಯಪ್ರದೇಶ, ಮುಂಬಯಿ, ಪೂನಾ, ಮೈಸೂರು, ಬೆಂಗಳೂರು ಮಾತ್ರವಲ್ಲದೆ ನಾನಾ ಕಡೆಯ ಹೆಸರಾಂತ ಥಿಯೇಟರ್/ರೆಫೆರ್ಟರಿಗಳ ಪ್ರಬುದ್ಧ ನಾಟಕ ತಂಡಗಳು ಕನಸುಗಳ ಕಥೆ ಕಟ್ಟಿ ಕರ್ನಾಟಕದ ಉಡುಪಿ ಜಿಲ್ಲೆಯ […]

ನಿವೇಶನ ಹಂಚಿಕೆ: ಉದ್ದಿಮೆದಾರರಿಂದ ಅರ್ಜಿ ಆಹ್ವಾನ

ಉಡುಪಿ: ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವತಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕಾರ್ಕಳ ಕೈಗಾರಿಕಾ ವಸಾಹತುಗಳಲ್ಲಿನ ಮಳಿಗೆ, ಫ್ಲ್ಯಾಟ್, ಗೋದಾಮು, ಅಂಗಡಿ ಮತ್ತು ನಿವೇಶನಗಳ ಹಂಚಿಕೆಗಾಗಿ ಆಸಕ್ತ ಉದ್ದಿಮೆದಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 21 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ (www.kssidc.co.in ) ಸಂಪರ್ಕಿಸುವಂತೆ ಸಹಾಯಕ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಯುವ ಮಂಡಳಿ ಪ್ರಶಸ್ತಿ-ಅರ್ಜಿ ಆಹ್ವಾನ

ಉಡುಪಿ: ಭಾರತ ಸರಕಾರದ ನೆಹರು ಯುವ ಕೇಂದ್ರ, ಯುವಕ-ಯುವತಿ ಮಂಡಳಿಗಳಿಗೆ 2019-20ನೇ ಸಾಲಿನ ಜಿಲ್ಲಾ ಯುವ ಮಂಡಳಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ ೧೦ ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನೆಹರು ಯುವ ಕೇಂದ್ರ, ರಜತಾದ್ರಿ ಮಣಿಪಾಲ, ಉಡುಪಿ ದೂ: ಉಡುಪಿ-0820 2574 992 ಸಂಪರ್ಕಿಸುವಂತೆ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಿರಿಯ ಮಹಿಳಾ ಸಹಾಯಕಿ ಹುದ್ದೆ: ಅರ್ಜಿ‌ ಆಹ್ವಾನ

ಉಡುಪಿ: ಜಿಲ್ಲೆಯ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ ಕಿರಿಯ ಮಹಿಳಾ ಸಹಾಯಕಿಯರ ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ 5 ತಿಂಗಳ ಅವಧಿಗೆ ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಕಿರಿಯ ಮಹಿಳಾ ಆರೋಗ್ಯ ತರಬೇತಿ ಪಡೆದು ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿದವರು ನವೆಂಬರ್ 2 ರ ಒಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಕೋಟ್ಯಾಂತರ ರೂ. ಅವ್ಯವಹಾರ: ಆಡಳಿತ ಮಂಡಳಿ ವಿರುದ್ಧ ಎಸಿಬಿಗೆ ದೂರು

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆಡಳಿತ ಮಂಡಳಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಎಸಗಿದೆಯೆಂದು ಆರೋಪಿಸಿ ಮಾನವ ಹಕ್ಕು ಹೋರಾಟಗಾರ ಸಿ.ಎಸ್. ಶ್ರೀನಾಥ್ ಎಂಬುವವರು ಎಸಿಬಿಗೆ ದೂರು ನೀಡಿದ್ದಾರೆ. ದೇಗುಲದ ಆಡಳಿತಾಧಿಕಾರಿ ಎಂ.ಜೆ. ರೂಪಾ ಹಾಗೂ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಅವರ ವಿರುದ್ಧ ಪಶ್ಚಿಮ ವಲಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಲ್ಲಿ ದೂರು ದಾಖಲಾಗಿದೆ. ದೇವಸ್ಥಾನದಲ್ಲಿ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಹಾಗೂ ಬೆಲೆಬಾಳುವ ಪುರಾತನ ವಿಗ್ರಹಗಳು ನಾಪತ್ತೆಯಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.