ಸಹಾಯ ಹಸ್ತ: ಅಂಧ ಮಗುವಿನ ಬಾಳಿಗೆ ಬೆಳಕಾದ ಸೋನು ಸೂದ್

ಇವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ. ಇದೀಗ ಮತ್ತೊಂದು ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ. ಬಿಹಾರದ ನವಾದಾ ನಗರದ ಎರಡೂ ಕಣ್ಣಿಲ್ಲದ ಮಗುವಿನ ಚಿಕಿತ್ಸಾ ವೆಚ್ಚ ಭರಿಸಲಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್​ ಕಾಣಿಸಿಕೊಂಡ ಸಂದರ್ಭದಲ್ಲಿ ಅನೇಕರಿಗೆ ಸಹಾಯ ಮಾಡುವ ಮೂಲಕ ಬಾಲಿವುಡ್​ ನಟ, ನಿರ್ಮಾಪಕ ಸೋನು ಸೂದ್​ ರಿಯಲ್​ ಲೈಫ್​ ಹೀರೋ ಎನಿಸಿಕೊಂಡಿದ್ದಾರೆ.
ನಟ ಸೋನು ಸೂದ್​ ಬಿಹಾರದ ನವಾದಾ ನಗರದ ಎರಡೂ ಕಣ್ಣಿಲ್ಲದ ಮಗುವಿನ ಚಿಕಿತ್ಸಾ ವೆಚ್ಚ ಭರಿಸಲಿದ್ದಾರೆ.

ನಟ ಸೋನು ಸೂದ್​ ಅಂಧ ಮಗು ಗುಲ್ಶನ್​ಗೆ ಚಿಕಿತ್ಸೆ ಕೊಡಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಸೋನು ಟ್ವೀಟ್​ನಲ್ಲಿ, “ಗುಲ್ಶನ್​ ನಿನ್ನ ಚಿಕಿತ್ಸೆಯ ಸಮಯ ಬಂದಿದೆ, ಇನ್ನು ನಿನ್ನ ಕಣ್ಣುಗಳಿಂದಲೇ ಜಗತ್ತನ್ನು ನೋಡಬಹುದು” ಎಂದು ಬರೆದಿದ್ದಾರೆ. 11 ತಿಂಗಳ ಮುಗ್ಧ ಗುಲ್ಶನ್​ ಕಣ್ಣಿಲ್ಲದೇ ಹುಟ್ಟಿದ್ದು, ಸೋನು ಅವರಿಂದಾಗಿ ಮಗು ಇನ್ನು ಮುಂದೆ ಜಗತ್ತನ್ನು ನೋಡಲು ಮತ್ತು ಯಾರ ಸಹಾಯವಿಲ್ಲದೇ ಜೀವನ ನಡೆಸಲು ಸಾಧ್ಯವಾಗುತ್ತದೆ

ಗುಲ್ಶನ್​ ತಂದೆ ರಾಜೇಶ್​ ಚೌಹಾಣ್​ ರಿಕ್ಷಾ ಚಾಲಕರಾಗಿದ್ದಾರೆ. ತಾಯಿ ಗೃಹಿಣಿ. ಇವರ ಜೀವನ ನಡೆದುಕೊಂಡು ಹೋಗುತ್ತಿರುವುದೇ ರಾಜೇಶ್​ ಅವರ ದುಡಿಮೆಯಿಂದ. ಇಷ್ಟು ಕಷ್ಟದಲ್ಲಿರುವ ಕುಟುಂಬದ ಸಮಸ್ಯೆಗೆ ಸೋನ್​ ಸೂದ್​ ನೆರವಿಗೆ ಬಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಂತ್ರಸ್ತ ಮಗುವಿನ ತಂದೆ, “ಸೋನು ಸೂದ್ ಕೇವಲ ನಟ ಮಾತ್ರವಲ್ಲ, ಪ್ರತಿಯೊಬ್ಬ ನಿರ್ಗತಿಕ ದೇಶವಾಸಿಗಳಿಗೂ ದೇವರು ಆಗಿದ್ದಾರೆ” ಎಂದು ಹೇಳಿದ್ದಾರೆ.
ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಸಹಾಯ ಹಸ್ತ: ಕೆಲವು ತಿಂಗಳುಗಳ ಹಿಂದೆ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಸೋನು ಸೂದ್​ ಸಹಾಯ ಹಸ್ತ ಚಾಚಿದ್ದರು. ಉಜ್ಜಯಿನಿಯ ಕಣಿಪುರದಲ್ಲಿರುವ ತಿರುಪತಿ ಧಾಮದ ನಿವಾಸಿ ಅಥರ್ವ ಎಂಬ ಬಾಲಕ ಬೆನ್ನುಮೂಳೆಯ ಸ್ನಾಯು ಕ್ಷೀಣತೆ sma-2 ಕಾಯಿಲೆಯಿಂದ ಬಳಲುತ್ತಿದ್ದ. ಅದಕ್ಕೂ ಮೊದಲು ಬಾಲಕನ ಪೋಷಕರು ನಟ ಸೋನು ಸೂದ್​ ಭೇಟಿಯಾಗಿ ಮಗುವಿನ ಕಾಯಿಲೆ ಕುರಿತು ದುಃಖ ಹಂಚಿಕೊಂಡಿದ್ದರು. ಹೀಗಾಗಿ ಅಥರ್ವ ಚಿಕಿತ್ಸೆಗೆ ತಮ್ಮಿಂದ ಸಾಧ್ಯವಿರುವ ಎಲ್ಲ ಸಹಾಯ ಮಾಡಿದ್ದರು. ಅಷ್ಟೇ ಅಲ್ಲದೆ, ಮಗುವಿನ ಚಿಕಿತ್ಸೆಗೆ ಸಾಧ್ಯವಾದಷ್ಟು ದೇಣಿಗೆ ನೀಡುವಂತೆ ಜನರಲ್ಲಿ ಮನವಿ ಮಾಡಿದ್ದರು.

ಬಡ ಕುಟುಂಬದಲ್ಲಿ ಜನಿಸಿದ ಅಂಧ ಮಗು.. ಬಿಹಾರದ ನವಾದಾ ನಗರದ ಪಕ್ರಿಬರವಾನ್ ಪೊಲೀಸ್ ಠಾಣಾ ವ್ಯಾಪ್ತಿಯ ಗೋಗನ್ ಪಂಚಾಯತ್‌ನ ಅಮರಪುರ ಗ್ರಾಮದಲ್ಲಿ ಇಂತಹ ಮಗು ಜನಿಸಿದೆ. ಆದರೆ ಗುಲ್ಶನ್​ ಕುಟುಂಬದವರು ಬಡವರಾಗಿದ್ದು, ಮಗುವಿನ ಚಿಕಿತ್ಸೆ ವೆಚ್ಚ ಭರಿಸಲು ಶಕ್ತರಾಗಿಲ್ಲ. ಹಾಗಾಗಿ ಈ ಮಗುವಿನ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ವೀಕ್ಷಿಸಿದ ನಟ ಸೂದ್​ ಈ ಬಡ ಕುಟುಂಬಕ್ಕೆ ದೇವರಾಗಿ ಬಂದಿದ್ದಾರೆ. ಮಗುವಿನ ಪಾಲಿಗೆ ಆಶಾಕಿರಣವಾಗಿದ್ದಾರೆ.