ನಾವೇನೋ ಹೆಲ್ಮೆಟ್ ಬಳಸುವ ಕಾನೂನು ಇದೆ ಅಂತೆಲ್ಲಾ ಹೆದರಿ ಇದ್ದ ಬದ್ದ ಕಡೆಗೆ ಬೈಕ್ನಲ್ಲಿ ಹೋಗುವಾಗ ಹೆಲ್ಮೆಟ್ ಹಾಕಿಕೊಂಡೇ ಹೋಗುತ್ತೇವೆ. ಆದರೆ ಅತೀಯಾದ ಹೆಲ್ಮೆಟ್ ಬಳಸಿದರೆ ತಲೆ ಕೂದಲೆಲ್ಲಾ ಉದುರಿ ಹೋಗಿ “ಬಾಂಡ್ಲಿ”ಆಗುತ್ತಾರಂತೆ. ಹೆಲ್ಮೆಟ್ ಬಳಸಿದ್ರೆ ತಲೆಕೂದಲು ಉದುರುತ್ತದೆ ಎನ್ನುವ ಕುರಿತು ಇದೀಗ ಚರ್ಚೆಯಾಗುತ್ತಿದೆ. ಕೆಲವೊಬ್ಬರು ಹಾಗೇನು ಇಲ್ಲ, ಅದು ಕೆಲವೊಂದು ಹೆಲ್ಮೆಟ್ ಗಳು ತಲೆಗೆ ಒಗ್ಗದ ಕಾರಣ ಕೂದಲು ಉದುರುತ್ತದೆ ಅಷ್ಟೆ, ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಹೆಲ್ಮೆಟ್ ಬಳಸಿದ್ರೆ ತಲೆ ಕ್ರಮೇಣ ಬೋಳಾಗುತ್ತದೆ ಎಂದುತಮ್ಮ ಅನುಭವ ಹೇಳಲು ಶುರುಮಾಡಿದ್ದಾರೆ. ಅದೇನೇ ಇರಲಿ ಕೂದಲು ಉದುರದಿರಲು ಏನೇನ್ ಮಾಡಬೇಕು? ಹಾಗೂ ಹೆಲ್ಮೆಟ್ ಅನ್ನು ಫ್ರೆಂಡ್ಲಿಯಾಗಿ ಬಳಸುವ ವಿಧಾನಗಳ ಬಗ್ಗೆ ನಾವೊಂದಿಷ್ಟು ಮಾಹಿತಿ ನೀಡುತ್ತೇವೆ.
ಹೆಲ್ಮೆಟ್ ಬಳಕೆಯ ಬಗ್ಗೆ ಕೆಲವೊಂದು ಟಿಪ್ಸ್ ಇಲ್ಲಿದೆ ನೋಡಿ.
- ಹೆಲ್ಮೆಟ್ ಧರಿಸುವ ಮೊದಲುತಲೆಗೆ ಸ್ಕಾರ್ಫ್ ಅಥವಾ ಟೊಪ್ಪಿ ಧರಿಸಿ, ಇದರಿಂದ ಕೂದಲು ಉದುರುವುದನ್ನು ತಡೆಗಟ್ಟಬಹುದು.ಇದಕ್ಕಾಗಿಯೇ ಹೆಲ್ಮೆಟ್ ಅಂಗಡಿಯಲ್ಲಿ ಟೊಪ್ಪಿ ಲಭ್ಯವಿದೆ. ಅಥವಾ ಹೆಲ್ಮೆಟ್ ಧರಿಸುವ ಮೊದಲು ತಲೆಗೆ ಯಾವುದಾದರೂ ಬಟ್ಟೆಯನ್ನೂ ಸುತ್ತಿಕೊಳ್ಳಬಹುದು.
- ಸಾಧ್ಯವಾದಷ್ಟು ಟೈಟ್ ಆಗಿರುವ ಹೆಲ್ಮೆಟ್ ಬಳಸುವುದನ್ನು ಕಡಿಮೆ ಮಾಡಿ, ಹೆಲ್ಮೆಟ್ ನಿಮ್ಮ ತಲೆಗೆ ಬಿಗಿಯಾದರೆ ಅದು ನಿಮ್ಮ ಕೂದಲಿನ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹಾಗಾಗಿ ಸರಳವಾದ ತಲೆ ಹೊರಗೆ ಗಾಳಿಯಾಡುವ ಹೆಲ್ಮೆಟ್ ಗಳನ್ನೇ ಬಳಸಿ.
- ನಿಮ್ಮ ಹುಡುಗ/ಹುಡುಗಿಯ ಜೊತೆಯಲ್ಲಿ ಬೈಕ್ ನಲ್ಲಿ ಖುಷಿಯಿಂದ ಸಂಚರಿಸುವಾಗ ಪರಿಚಿತರ ದೃಷ್ಟಿಯಿಂದ ತಪ್ಪಿಸಲು ಹೆಲ್ಮೆಟ್ ಸೂಕ್ತ ಉಪಾಯ.
- ನಿಮಗೆ ಪರಿಚಯದ, ಕಿರಿಕಿರಿ ಎನ್ನಿಸುವ ವ್ಯಕ್ತಿ ಯಾರಾದರೂ ದಾರಿ ಮಧ್ಯೆ ಡ್ರಾಪ್ ಕೇಳಲು ಕೈ ಅಡ್ಡ ಮಾಡಿದರೆ ಬೈಕ್ ನಿಲ್ಲಿಸದೆ, ಪರಿಚಯವೇ ಇಲ್ಲದಂತೆ ಹೋಗಿಬಿಡಬಹುದು.
- ನಿಮ್ಮ ತಲೆಯ ಅಳತೆಗೆ ತಕ್ಕುದಾದ ಹೆಲ್ಮೆಟ್ ಧರಿಸುವುದರಿಂದ ಅಪಘಾತದ ಸಂದರ್ಭದಲ್ಲಿ ಹೆಚ್ಚು ರಕ್ಷಣೆ ಒದಗುತ್ತದೆ.
- ಕೊಳೆಯಾಗಿರುವ ಹೆಲ್ಮೆಟ್ ಗೆ ಶಾಂಪೂ, ಕೋಲ್ಗೇಟ್ ಹಾಗೂ ಸ್ವಲ್ಪ ಇನೋವನ್ನು ನೀರಿಗೆ ಹಾಕಿ ಮಿಶ್ರಣ ಮಾಡಿ ತೊಳೆದರೆ ಹೊಸತರಂತೆ ಫಳ-ಫಳ ಹೊಳೆಯುತ್ತದೆ.
- ಸೂರ್ಯನ ಬಿಸಿಲು ಕಣ್ಣಿಗೆ ಹೊಡೆಯುತ್ತಿದ್ದರೆ ಕಪ್ಪು ಬಣ್ಣದ ಇನ್ಸುಲಿನ್ ಗಮ್ ಟೇಪ್ ಅನ್ನು ಹೆಲ್ಮೆಟ್ ನ ಮೇಲ್ತುದಿಯಲ್ಲಿ ಅಂಟಿಸಿದರೆ ಬಿಸಿಲಿನ ಝಳದಿಂದ ಮುಕ್ತಿ ಹೊಂದಬಹುದು.
- ಹೆಲ್ಮೆಟ್ ನಿಂದ ಕೂದಲು ಉದುರುತ್ತಂತೆ : ಇಲ್ಲಿದೆ ಹೆಲ್ಮೆಟ್ ಬಳಕೆಯ ಟಿಪ್ಸ್ಗಳು