ಹೆಬ್ರಿ: ಕಬ್ಬಿಣದ ಗುಜ್ಜಿ ತೆಗೆಯುತಿದ್ದಾಗ ವಿದ್ಯುತ್ ಹರಿದು ಯುವಕ ಮೃತ

ಹೆಬ್ರಿ:  ಸೆಂಟ್ರಿಂಗ್ ಕೆಲಸದ ಸ್ಲಾಬ್ ಗೆ ಹಾಕಿದ ಕಬ್ಬಿಣದ ಗುಜ್ಜಿ ತೆಗೆಯುತಿದ್ದಾಗ ವಿದ್ಯುತ್ ಹರಿದು ಯುವಕ ಮೃತ ಪಟ್ಟ ಘಟನೆ ಹೆಬ್ರಿ ತಾಲೂಕಿನ  ನಾಡ್ಪಾಲಿನ ಸೋಮೇಶ್ವರ ಬಳಿ ನಡೆದಿದೆ.

 

ರವಿ ಪೂಜಾರಿ (28)ಮೃತಪಟ್ಟ ಯುವಕ.  ಜ.8 ರಂದು ರವಿ ಪೂಜಾರಿ ಎಂಬವರು  ದೈವದ ಗುಡಿಯ ಕಬ್ಬಿಣದ ಗುಜಿಯನ್ನು  ಎಳೆದಾಗ ಗುಡಿಯ ಬಳಿಯಿರುವ 11 ಕೆ.ವಿ ಟ್ರಾನ್ಸ್ ಫಾರ್ಮರ್ ಗೆ ಕಬ್ಬಿಣದ ಗುಜ್ಜಿ ತಾಗಿದ ಪರಿಣಾಮ ಆತನ ದೇಹದಲ್ಲಿ  ವಿದ್ಯುತ್ ಪ್ರವಾಹಿಸಿ ಸ್ಥಳದಲ್ಲಿಯೆ ಕುಸಿದು ಬಿದ್ದಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ  ಮಾರ್ಗದ ಮಧ್ಯೆ ಮೃತಪಟ್ಟಿದ್ದಾರೆ.

 

ಗುಡಿಯ ಕೆಲಸ ಮಾಡಿಸುತ್ತಿರುವ ವಿ.ಆರ್ ಪೈ ಹಾಗು ಸೆಂಟ್ರಿಂಗ್ ಕೆಲಸ ಮಾಡಿಸುವ ಮಹೇಶ್ ಪೂಜಾರಿ ವಿರುದ್ದ ಕೆಲಸಗಾರರ ಸುರಕ್ಷತೆಯ ಬಗ್ಗೆ ಯಾವುದೇ ಮುಂಜಾಗತ್ರಾ ಕ್ರಮವನ್ನು ತೆಗೆದು ಕೊಳ್ಳದೇ ಕೆಲಸಗಾರರ ಮೇಲೆ ತೀರಾ ನಿರ್ಲಕ್ಷತನ ತೋರಿದ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.