ಹೆಬ್ರಿ: ಹೆಂಡತಿ ಮನೆ ಬಿಟ್ಟು ಹೋದ ಕಾರಣಕ್ಕಾಗಿ ಜೀವನದಲ್ಲಿ ಮನನೊಂದ ಪತಿ ಆತ್ಮಹತ್ಯೆ ಶರಣಾದ ಘಟನೆ ಹೆಬ್ರಿ ತಾಲೂಕಿನ ಪಡುಕುಡೂರು ಗ್ರಾಮದಲ್ಲಿ ನಡೆದಿದೆ.
ಪಡುಕುಡೂರು ನಿವಾಸಿ 48 ವರ್ಷದ ಸುರೇಶ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ವಿಪರೀತ ಮದ್ಯಸೇವನೆಯ ಚಟ ಹೊಂದಿದ್ದು, ಇದೇ ಕಾರಣಕ್ಕಾಗಿ ಹೆಂಡತಿಯ ಜೊತೆ ಮನಸ್ತಾಪ ಉಂಟಾಗಿ ಆಕೆ ಎರಡು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. ಹೆಂಡತಿ ಮರಳಿ ಬಾರದ ಕಾರಣದಿಂದ ಸುರೇಶ್ ಜೀವನದಲ್ಲಿ ಮನನೊಂದು ಮನೆಯ ಕೋಣೆಯ ಪಕ್ಕಾಸಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.