ಹೆಬ್ರಿ: ಕನ್ಯಾನ ರೈತಸೇವಾ ಗ್ರಾಮೋದ್ಯೋಗ ಸಂಸ್ಥೆಯ ನೌಕರರು ಮತ್ತು ಪರಿಸರಾಸಕ್ತರು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ನೇತೃತ್ವದಲ್ಲಿ ವನಮಹೋತ್ಸವ ಆಚರಿಸಿ 225 ಗಿಡಗಳ ನಾಟಿ ಮಾಡಿದರು.
ಸಂಸ್ಥೆಯ ಮುಖ್ಯ ಪ್ರವರ್ತಕರಾದ ಸರಸ್ವತಿ ಎನ್ ನಾಯಕ್, ಲಕ್ಷ್ಮಿ ನಾರಾಯಣ ನಾಯಕ್, ಪ್ರಬಂಧಕ ಉಪೇಂದ್ರ ಹೆಬ್ಬಾರ್, ಹೆಬ್ರಿ ಪಂ. ಮಾಜಿ ಅಧ್ಯಕ್ಷ ಸುಧಾಕರ ಹೆಗ್ಡೆ ಅರುಣ್ ಶೆಟ್ಟಿ ಕನ್ಯಾನ, ಹುಣ್ಣೆಯಡಿ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.

ಸಂಸ್ಥೆಯ ನೂರಕ್ಕೂ ಅಧಿಕ ಕಾರ್ಮಿಕರು ನಮ್ಮ ಮರ ನಮ್ಮ ಉಸಿರು ಕಾರ್ಯಕ್ರಮದಡಿ ತಮ್ಮ ದೈನಂದಿನ ದುಡಿಮೆ ಮರೆತು ಅರ್ಧ ದಿನ ಗಿಡ ನೆಟ್ಟು ಖುಷಿಪಟ್ಟು ಮಧ್ಯಾಹ್ನ ಸಾಮೂಹಿಕ ಭೋಜನ ಸವಿದರು.


















