ಹೆಬ್ರಿ: ಸರಕು ಸಾಗಾಟದ ಲಾರಿಯೊಂದಿಗೆ ಚಾಲಕನೊಬ್ಬ ನಾಪತ್ತೆಯಾದ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಣೆಯಾದ ವ್ಯಕ್ತಿಯನ್ನು ಧಾರವಾಡ ಜಿಲ್ಲೆಯ ಆದರ್ಶ ನಗರ ಚಿಕ್ಕಮಲ್ಲಿಗವಾಡ ರಸ್ತೆಯ ನಿವಾಸಿ ಬಸವರಾಜ್ ಶಿವಪ್ಪ ಬದ್ರಶೆಟ್ಟಿ (27) ಎಂದು ಗುರುತಿಸಲಾಗಿದೆ.
ಇವರು ಒಂದು ತಿಂಗಳಿಂದ ಧಾರವಾಡ ಜಿಲ್ಲೆಯ ಕರಡಿಕೊಪ್ಪ ನಿವಾಸಿ ಶಿವಾನಂದ ಮಾಲೀಕತ್ವದ (KA-26-A-0761) ನೋಂದಣಿ ಸಂಖ್ಯೆಯ ಟಾಟಾ1109 ಲಾರಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು.
ಫೆ. 19ರಂದು ಲಾರಿಯಲ್ಲಿ ಧಾರವಾಡದ ಬೇಲೂರು ಇಂಡಸ್ಟೀಸ್ ಏರಿಯದ ಸೌರ್ತನ್ ಪೆರೋ ಸ್ಟೀಲ್ ಲಿಮಿಟೆಡ್ ಕಂಪನಿಯಿಂದ ಕ್ರಷರ್ ಗೆ ಸಂಬಂಧಿಸಿದ ಮಿಷನರಿ ಸರಕುಗಳನ್ನು ಲೋಡ್ ಮಾಡಿಕೊಂಡು ಉಡುಪಿ ಜಿಲ್ಲೆಯ ಶಿವಪುರದ ಯು.ಎಸ್.ಕೆ ಕ್ರಷರ್ ಗೆ ಫೆ.20 ಬಂದಿದ್ದರು.
ಅದರಂತೆ ಫೆ. 20ರಂದು ಸಂಜೆ 4.18ಕ್ಕೆ ಶಿವಪುರ ಖಜಾನೆಯ ಯು.ಎಸ್.ಕೆ ಕ್ರಷರ್ ನಲ್ಲಿ ಮಿಷನರಿ ಸರಕನ್ನು ಅನ್ ಲೋಡ್ ಮಾಡಿದ್ದರು. ಬಳಿಕ ಸಂಜೆ 4.55ಕ್ಕೆ ಹೊರಟು ಉಳಿದ ಮಿಷನರಿ ಸರಕುಗಳನ್ನು ಕಾರ್ಕಳದ ರೇಂಜಾಳ ಮತ್ತು ಸೂಡಾ ಕ್ರಷರ್ ಗೆ ಹಾಕುತ್ತೇನೆಂದು ಲಾರಿ ಚಲಾಯಿಸಿಕೊಂಡು ಹೋಗಿದ್ದರು.
ಆದರೆ ಎರಡು ಕಡೆಗೆ ಹೋಗದೆ ಸರಕು ಸಮೇತ ಲಾರಿಯೊಂದಿಗೆ ಚಾಲಕ ಬಸವರಾಜ್ ಕಾಣೆಯಾಗಿದ್ದಾರೆ. ಚಾಲಕ ಬಸವರಾಜ್ ಪತ್ನಿ ದೀಪಾ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.