ಆಗಸ್ಟ್ 2 ರಿಂದ 6 ರವರೆಗೆ ಗುಡುಗು ಸಿಡಿಲಿನ ಸಹಿತ ಅಧಿಕದಿಂದ ಅತ್ಯಾಧಿಕ ಮಳೆಯ ಮುನ್ಸೂಚನೆ

ಉಡುಪಿ/ಮಂಗಳೂರು: ಕರ್ನಾಟಕ ಕರಾವಳಿಯಲ್ಲಿ ಮುಂದಿನ ಐದು ದಿನಗಳವರೆಗೆ ಗುಡುಗು ಸಿಡಿಲಿನ ಅಬ್ಬರದ ಸಹಿತ ಅತ್ಯಾಧಿಕ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಆಗಸ್ಟ್ 3 ರಿಂದ 6 ರವರೆಗೆ 115.6 ಮಿಮಿ ನಿಂದ 204.4 ಮಿಮಿ ವರೆಗೆ ಮಳೆಯಾಗುವ ನಿರೀಕ್ಷೆಯಿದ್ದು, ಸಮುದ್ರವೂ ಪ್ರಕ್ಷುಬ್ದವಾಗಲಿರುವ ಹಿನ್ನೆಯಲ್ಲಿ ಮೀನುಗಾರರು ನೀರಿಗೆ ಇಳಿಯದಂತೆ ಇಲಾಖೆ ಎಚ್ಚರಿಕೆ ನೀಡಿದೆ.