«ಸಿಂಥಿಯಾ ಮೆಲ್ವಿನ್
ಭಾರತೀಯ ಸಂಪ್ರದಾಯದಲ್ಲಿ ವೀಳ್ಯದೆಲೆಗೆ ಹೆಚ್ಚಿನ ಮಹತ್ವವಿದೆ. ವೀಳ್ಯದೆಲೆ ಭಾರತೀಯ, ಅದರಲ್ಲೂ ಕರಾವಳಿ ಕರ್ನಾಟಕದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಎಲ್ಲಾ ಶುಭಕಾರ್ಯಗಳಿಗೂ ವೀಳ್ಯದೆಲೆ ಬೇಕೇ ಬೇಕು.
ವೀಳ್ಯದ ಜೊತೆ ಅಡಿಕೆ ಮತ್ತು ಸುಣ್ಣವನ್ನು ಸೇರಿಸಿ ತಿನ್ನುವುದನ್ನು ನೋಡಿದ್ದೇನೆ. ಆದರೆ ವೀಳ್ಯದೆಲೆಯ ಕಷಾಯವನ್ನು ಮಾಡಬಹುದು ಎನ್ನುವುದು ಕೇಳಿದ್ದೀರಾ?
ಹೌದು. ವೀಳ್ಯದೆಲೆಯ ಕಷಾಯವನ್ನು ಮಾಡಿ ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಲಾಭಗಳಿದೆ.
ಕಷಾಯ ಮಾಡುವ ರೀತಿ:
ಒಂದು ಲೋಟ ಕುದಿಯುತ್ತಿರುವ ನೀರಿಗೆ ಒಂದು ವೀಳ್ಯದೆಲೆಯನ್ನು ಚೂರು-ಚೂರು ಮಾಡಿ ಹಾಕಿ ಅದಕ್ಕೆ ಅರ್ಧ ಇಂಚು ಚಕ್ಕೆ, ಒಂದು ಚಿಕ್ಕ ತುಂಡು ಶುಂಠಿ ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ಕುದಿಸಿ. ನಂತರ ಈ ಕಷಾಯವನ್ನು ಸೋಸಿ ಅದಕ್ಕೆ ಸ್ವಲ್ಪ ನಿಂಬೆರಸವನ್ನು ಹಿಂಡಿ ಕುಡಿಯಬೇಕು. ಮಕ್ಕಳಿಗಾದರೆ ನಿಂಬೆಯ ಬದಲು ಸ್ವಲ್ಪ ಬೆಲ್ಲವನ್ನು ಹಾಕಿ ಕುಡಿಯಲು ಕೊಡಬಹುದು.
ಆರೋಗ್ಯಕ್ಕೆ ಲಾಭಗಳು:
*ಕೊರೋನಾ ಸಮಯಕ್ಕೆ ಇದು ಹೇಳಿ ಮಾಡಿಸಿದ ಕಷಾಯ. ಈ ಕಷಾಯ ಕುಡಿಯುವುದರಿಂದ ರೋಗ-ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
*ಈ ಕಷಾಯ ಕುಡಿಯುವುದರಿಂದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ.
*ಕಫ ಮತ್ತು ಕೆಮ್ಮು ಕಡಿಮೆಯಾಗುತ್ತದೆ.
*ಕ್ಯಾನ್ಸರ್ ಪ್ರಕೋಪವನ್ನು ಕಡಿಮೆಗೊಳಿಸುತ್ತದೆ.
*ಚರ್ಮದ ಸಮಸ್ಯೆಯನ್ನು ನಿವಾರಿಸುತ್ತದೆ.
*ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.
*ಬಾಯಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸುತ್ತದೆ.