ಉಡುಪಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಉಡುಪಿ ಜಿಲ್ಲೆಯ, ಜಿಲ್ಲಾ ಸರ್ವೇಕ್ಷಣಾ ಘಟಕದಲ್ಲಿ ಖಾಲಿಯಾಗಿರುವ ಡೇಟಾ ಮೆನೇಜರ್ ಹುದ್ದೆಗೆ,ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು ಏಪ್ರಿಲ್ 15 ರಂದು ಬೆಳಗ್ಗೆ 10.30 ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ, ಅಜ್ಜರಕಾಡು ಉಡುಪಿ ಇಲ್ಲಿ ನೇರ ಸಂದರ್ಶನ ನಡೆಯಲಿದೆ.
ಪೋಸ್ಟ್ ಗ್ರಾಜುಯೇಟ್ ಇನ್ ಕಂಪ್ಯೂಟರ್ ಸೈನ್ಸ್ ಜೊತೆಗೆ ಒಂದು ವರ್ಷದ ಅನುಭವ ಅಥವಾ ಬಿ.ಎ ಇನ್ ಐಟಿ/ಎಲೆಕ್ಟ್ರಾನಿಕ್ಸ್ ವಿದ್ಯಾರ್ಹತೆ ಹೊಂದಿರುವ 40 ವರ್ಷ ವಯೋಮಿತಿಯೊಳಗಿನ ಅರ್ಹ ಅಭ್ಯರ್ಥಿಗಳು ಸ್ವ ವಿವರ ಹಾಗೂ ಶೈಕ್ಷಣಿಕ ದಾಖಲೆಯೊಂದಿಗೆ ಹಾಜರಾಗಬಹುದಾಗಿದೆ.
ಸಮಾಜ ಸೇವೆಯಲ್ಲಿ ಅನುಭವವಿದ್ದವರಿಗೆ ಆದ್ಯತೆ ನೀಡಲಾಗುವುದು ಸಂಚಿತ ವೇತನ 22050.00 ಆಗಿರುತ್ತದೆ ಎಂದು ಸದಸ್ಯ ಕಾರ್ಯದರ್ಶಿ , ಜಿಲ್ಲಾ ಆಯ್ಕೆ ಸಮಿತಿ, ಐ.ಡಿ.ಎಸ್.ಪಿ. ಘಟಕ ಉಡುಪಿ ಅವರ ಪ್ರಕಟಣೆ ತಿಳಿಸಿದೆ.