ಉಡುಪಿ: ಕರಾವಳಿಯಲ್ಲಿ ಫ್ರಾಡ್ ಕರೆಗಳ(ಮೋಸ ಮಾಡುವ ಕರೆಗಳು) ಹಾವಳಿ ಜಾಸ್ತಿಯಾಗುತ್ತಿದೆ. ಸಿಮ್ ವೆರಿಫಿಕೇಶನ್ ನೆಪದಲ್ಲಿ ಕರೆ ಮಾಡಿ ಮಾಹಿತಿ ಕೇಳುವ ವ್ಯಕ್ತಿಗಳು ಕ್ರಮೇಣ ನಮ್ಮ ಮಾಹಿತಿ ಕಸಿದು ದುಡ್ಡು ಕೀಳುತ್ತಾರೆ. ಮಂಗಳೂರಿನಲ್ಲಿ ಇಂತಹ ಪ್ರಕರಣಗಳನ್ನು ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಇದೀಗ ಉಡುಪಿ ಜಿಲ್ಲೆಯಲ್ಲೂ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಾರ್ಕಳದ ಚಿತ್ತರಂಜನ್ ನಕ್ರೆ ಅವರಿಗೆ ಅನಾಮಧೇಯ ಕರೆಯೊಂದು ಬಂದಿದ್ದು ಆ ಕಾಲ್ ರೆಕಾರ್ಡಿಂಗ್ ಅನ್ನು ಅವರು ಉಡುಪಿXPRESS.COM ಗೆ ನೀಡಿದ್ದಾರೆ. ಕರೆಯಲ್ಲಿ ಹಿಂದಿಯಲ್ಲಿ ವ್ಯಕ್ತಿ ಮಾತಾಡಿದ್ದಾರೆ. ಫ್ರಾಡ್ ಕರೆಗಳ ಬಗ್ಗೆ ಮೊದಲೇ ಅರಿವಿದ್ದ ಚಿತ್ತರಂಜನ್ ಅವರು ಕರೆ ಮಾಡಿದ ವ್ಯಕ್ತಿ ಹೇಳಿದ ಮಾತಿಗೆ ಜಗ್ಗಿಲ್ಲ. ಏನೇನು ಮಾಡ್ತಾನೆ ನೋಡುವ ಅಂತ ಕಾದಿದ್ದಾರೆ. ಕಾಲ್ ರೆಕಾರ್ಡಿಂಗ್ ನಲ್ಲಿ ಏನಿದೆ ನೀವೇ ನೋಡಿ.ಈ ರೆಕಾರ್ಡಿಂಗ್ ಅನ್ನು ನಾವು ಎಲ್ಲರಿಗೂ ಬಿತ್ತರಿಸುತ್ತಿರುವ ಉದ್ದೇಶ ನೀವ್ಯಾರೂ ಮೋಸ ಹೋಗಬಾರದು, ನಿಮಗೆ ಇಂತಹ ಕರೆ ಬಂದರೆ ಜಾಗರೂಕರಾಗಿರಿ ಎಂದು ಹೇಳಲಷ್ಟೇ ಇದು ನಮ್ಮ ಕಾಳಜಿ