ನವದೆಹಲಿ: ಚೊಚ್ಚಲ ಪಂದ್ಯದಲ್ಲೇ ಗುಜರಾತ್ ಟೈಟಾನ್ಸ್ ಐಪಿಎಲ್ 2022 ಟ್ರೋಫಿ ಎತ್ತಲು ಕಾರಣನಾದ ತಂಡದ ನಾಯಕ ಹಾರ್ದಿಕ್ ಪಾಂಡ್ಯನನ್ನು ಭವಿಷ್ಯದ ಟೀಂ ಇಂಡಿಯಾ ನಾಯಕನಾಗಿ ನೋಡಲು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಬಯಸುತ್ತಿದ್ದಾರೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೈಟಾನ್ಸ್ ಏಳು ವಿಕೆಟ್ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಲೀಗ್ ಟೇಬಲ್ನಲ್ಲಿಯೂ ಅಗ್ರಸ್ಥಾನದಲ್ಲಿದ್ದು ಪ್ರತಿಷ್ಠಿತ ಐಪಿಎಲ್ 2022 ಟ್ರೋಫಿಯನ್ನು ಬಗಲಿಗೆ ಹಾಕಿಕೊಂಡಿತು.
ಪಾಂಡ್ಯ ಅವರ ನಾಯಕತ್ವದ ಕೌಶಲ್ಯವನ್ನು ಹಲವಾರು ಪ್ರಸ್ತುತ ಮತ್ತು ಮಾಜಿ ಆಟಗಾರರು ಶ್ಲಾಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ, 28 ವರ್ಷದ ಪಾಂಡ್ಯ ನಾಯಕತ್ವದಿಂದ ಪ್ರಭಾವಿತರಾದ ಇಂಗ್ಲೆಂಡ್ ಶ್ರೇಷ್ಠ ಆಟಗಾರ ಮುಂದಿನ ಒಂದೆರಡು ವರ್ಷಗಳಲ್ಲಿ ಅವರು ಭಾರತದ ನಾಯಕತ್ವಕ್ಕೆ ಹಕ್ಕು ಸಾಧಿಸಬಹುದು ಎಂದು ಹೇಳಿದ್ದಾರೆ.
Fantastic achievement for a new franchise … If India need a captain in a couple of years I wouldn’t look past @hardikpandya7 … Well done Gujurat .. #IPL2022
— Michael Vaughan (@MichaelVaughan) May 29, 2022