ಕೂದಲು ಉದುರುತ್ತಿದೆಯೇ? ಹಾಗಾದ್ರೆ ಜಸ್ಟ್ ಈ ಟಿಪ್ಸ್ ಫಾಲೋ ಮಾಡಿ

ನಂಗೆ ಕೂದಲು ಉದುರುತ್ತದೆ? ಏನ್ ಮಾಡ್ಲಿ ಅನ್ನೋದು ಬಹುತೇಕ ಜನರ ಕಾಮನ್ ಪ್ರಶ್ನೆಯಾಗಿಬಿಟ್ಟಿದೆ. ಕೂದಲು ಉದುರದಂತೆ ನಾವು ಏನೇನ್ ಕ್ರಮ ಕೈಗೊಳ್ಳಬಹುದು? ಮನೆಯಲ್ಲಿಯೇ  ಕೂದಲಿನ ಆರೈಕೆಗಾಗಿ ಮಾಡುವ ಸುಲಭ ವಿಧಾನಗಳಾವುದು ಎನ್ನುವ ಕುರಿತು ಕಾರ್ಕಳದ ಡಾ. ಹರ್ಷಾ ಕಾಮತ್ ಭರ್ಜರಿ ಟಿಪ್ಸ್ ನೀಡಿದ್ದಾರೆ. ಅವರು ಹೇಳಿದ್ದನ್ನು ಫಾಲೋ ಮಾಡಿದರೆ ಕೂದಲು ಉದುರುವ ಸಮಸ್ಯೆಯನ್ನು ಖಂಡಿತಾ ನಿವಾರಿಸಬಹುದು.

ಕೂದಲು ಉದುರಲು ಏನ್ ಕಾರಣ?

 ಸಾಮಾನ್ಯವಾಗಿ ಇನ್ಫೆಕ್ಷನ್,  ಪ್ಲಾಸ್ಟಿಕ್ ಬಾಚಣಿಗೆ ಉಪಯೋಗಿಸುವುದು,  ಹೇರ್ ಕಲರಿಂಗ್, ಕೆಮಿಕಲ್ ಯುಕ್ತ ಶ್ಯಾಂಪು, ಬೋರ್ವೆಲ್ ನೀರು, ವಿಟಮಿನ್ ಡಿ ಡಿಫಿಷಿಯನ್ಸಿ, ಧೂಮಪಾನ, ಹೈಪರ್ ಥೈರಾಯಿಡಿಸಂ, ಹೈಪರ್ಥೈರಾಯಿಡಿಸಂ, ಹಾರ್ಮೋನಲ್ ಇಂಬ್ಯಾಲೆನ್ಸ್, ಅನಿಮಿಯಾ ಮತ್ತು ಹೆರಡಿಟರಿ ಇವೆಲ್ಲಾ ಕೂದಲು ಉದುರಲು ಬಹುಮುಖ್ಯ ಕಾರಣಗಳು.

 

ಇದಕ್ಕೆಲ್ಲಾ ಮದ್ದು ಇಲ್ಲಿದೆ ನೋಡಿ:

* ಡ್ಯಾಂಡ್ರಫ್ ಇದ್ದರೆ, ನಾಲ್ಕು ಚಮಚ ಮೆಂತೆ ಕಾಳನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿ ನಂತರ ಮೊಸರಿನ ಜೊತೆಗೆ ಬ್ಲೆಂಡ್ ಮಾಡಿ ಪೇಸ್ಟ್ ಮಾಡಿರಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ, ಮೂವತ್ತು ನಿಮಿಷಗಳ ನಂತರ ಶಿಖಾ ಕಾಯಿ ಪೌಡರ್ ನಿಂದ ಕೂದಲನ್ನು ತೊಳೆಯಿರಿ. ವಾರದಲ್ಲಿ ಎರಡು ದಿವಸ ಇದನ್ನು ಮಾಡಿ ಸಾಕು.

ಕೂದಲು ಉದುರುವ ಸಮಸ್ಯೆಗೆ ಅಲೊವೆರಾ ಜೆಲ್, ನೆಲ್ಲಿಕಾಯಿ ರಸ,ಭ್ರಂಗರಾಜ ಎಣ್ಣೆ ,ಬ್ರಾಹ್ಮಿ ಎಣ್ಣೆ,  ತಲೆಗೆ ಹಾಗೂ ಕೂದಲಿಗೆ ಮಸಾಜ್ ಮಾಡಿ ಒಂದು ಗಂಟೆಯ ನಂತರ ಕೂದಲನ್ನು ತೊಳೆಯಬೇಕು. ಹೀಗೆ ಯಾವಗಲೂ ಮಾಡಿದರೆ ಉತ್ತಮ.

ಉದ್ದ ಕೂದಲಿಗಾಗಿ, ಈರುಳ್ಳಿ ರಸವನ್ನು ತಲೆಗೆ ಹಾಗೂ ಕೂದಲಿಗೆ ಹಚ್ಚಿ ಮೂವತ್ತು ನಿಮಿಷಗಳ ನಂತರ ತೊಳೆಯಿರಿ .

 ಚಿಕ್ಕ ವಯಸ್ಸಿನಲ್ಲಿ ಕಂಡು ಬರುವ ಬಿಳಿ  ಕೂದಲಿನ ಸಮಸ್ಯೆಗೆ ಎರಡು ಚಮಚ ಬಾದಾಮಿ ಎಣ್ಣೆಗೆ, ಕಾಲು ಚಮಚ ನಿಂಬೆ ಹಣ್ಣಿನ ರಸ ಸೇರಿಸಿ ಕೂದಲಿಗೆ ಮಸಾಜ್ ಮಾಡಿರಿ.

ಶಿಖ ಕಾಯಿ ಪೌಡರ್ ಅನ್ನು ಮೊಸರಿನೊಂದಿಗೆ ಕಲೆಸಿ ಕೂದಲಿಗೆ ಹಚ್ಚಿ ಹದಿನೈದು ನಿಮಿಷದ ನಂತರ ತೊಳೆದರೆ ಕೂದಲು ಕೂಲಾಗಿರುತ್ತದೆ.

 ಕೂದಲ ಎಣ್ಣೆಯನ್ನು ಮನೇಲೇ ತಯಾರಿಸಿ:

ಎರಡು ಕಪ್ ತೆಂಗಿನ ಎಣ್ಣೆ, ಒಂದು ಮುಷ್ಟಿ ಕರಿಬೇವಿನ, ಸೊಪ್ಪು ಒಂದು ಮುಷ್ಟಿ, ಮೆಂತೆ ಸೊಪ್ಪುನ್ನುಹಾಕಿ ಗ್ಯಾಸ್ ಮೇಲೆ ಇಪ್ಪತ್ತು ನಿಮಿಷ ಸಿಮ್ ಮೋಡ್ ನಲ್ಲಿ ಇಟ್ಟುಬಿಡಿ.  ತಣ್ಣಗಾದ ನಂತರ  ಅದನ್ನು ಬಾಟಲಿಗೆ ಹಾಕಿ ಇಡಬೇಕು. ಈ ಎಣ್ಣೆಯು ಎಲ್ಲಾ ಕೂದಲಿನ ಸಮಸ್ಯೆಗೆ ಒಳ್ಳೆಯದು .

ಮೂರು ಚಮಚ ಆಮ್ಲ ಜ್ಯೂಸ್ ಗೆ  ಮೂರು ಚಮಚ ನೀರು ಸೇರಿಸಿ ಬೆಳಿಗ್ಗೆ ಹಾಗೂ ಸಾಯಂಕಾಲ ಸೇವಿಸಿದರೆ ನಿಮ್ಮ ಎಲ್ಲಾ ಕೂದಲಿನ ಸಮಸ್ಯೆ ಮಾಯವಾಗುವುದು .ಮೂರು ತಿಂಗಳು ಹೀಗೆ ಮಾಡಿದರೆ ಉತ್ತಮ

ಡಾ. ಹರ್ಷಾ ಕಾಮತ್