ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭಾವಂತ ಪುಟಾಣಿ ಹಾಡುಗಾರರಿಗೆ ಕಾದಿದೆ ಇಲ್ಲೊಂದು ಸುವರ್ಣಾವಕಾಶ. ಈ ಸುವರ್ಣಾವಕಾಶವೇ “ಹಾಡು ನೀ ಹಾಡು”. ಭಾಗವಹಿಸುವ ಪುಟಾಣಿಗಳು 5 ರಿಂದ 10 ನೇ ತರಗತಿ ಮಕ್ಕಳಾಗಿದ್ದು ಉಡುಪಿ ಅಥವಾ ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳಾಗಿರಬೇಕು. ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರತಿಭೆಗೆ ತಕ್ಕ ವೇದಿಕೆಯ ಜೊತೆಗೆ ಅವಕಾಶಗಳ ಮಹಾಪುರವನ್ನು ಒದಗಿಸುವುದೇ ಈ ಬೃಹತ್ ಪ್ರತಿಭಾನ್ವೇಷಣೆಯ ಮೂಲ ಉದ್ದೇಶ. ಆಯ್ಕೆಗೊಂಡ ಹಾಡುಗಾರರಿಗೆ ಜಿಲ್ಲೆಯ ಹೆಸರಾಂತ ಸಂಗೀತ ಪ್ರಾವೀಣ್ಯರಿಂದ ಮಾರ್ಗದರ್ಶನದ ಜೊತೆಗೆ ಯಶಸ್ಸಿನ ಹಾದಿಯಲಿ ಕೈ ಹಿಡಿದು ನಡೆಸುವ ಪ್ರಯತ್ನಇದಾಗಿದೆ.
ಆರು ತಿಂಗಳುಗಳ ಕಾಲ ನಡೆಯುವ ಈ ಕಾರ್ಯಕ್ರಮ ಸಹಾಯ ಹಸ್ತ ಲಯನ್ಸ್ ಕ್ಲಬ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಆಯೋಜನೆಗೊಳ್ಳುತ್ತಿದೆ. ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗು ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಇವರ ಪ್ರೋತ್ಸಾಹ ನಿಜಕ್ಕೂ ಶ್ಲಾಘನೀಯವಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಉಚಿತ ರಿಜಿಸ್ಟ್ರೇಷನ್ ಪ್ರಾರಂಭವಾಗಿದ್ದು,ಕೆಳಕಂಡ ವಿಧಾನದನಂತೆ ಸುಲಭವಾಗಿ ರಿಜಿಸ್ಟರ್ ಮಾಡಬಹುದು.
ನಿಮ್ಮ ಸ್ಮಾರ್ಟ್ ಫೋನ್ ನಿಂದ ಈ ಕೋಡ್ ಅನ್ನು “ಸ್ಕ್ಯಾನ್” ಮಾಡಿ ಫಾರ್ಮ್ ಭರ್ತಿ ಮಾಡಿ, ಫಾರ್ಮ್ ‘ಸಬ್ಮಿಟ್’ ಮಾಡಿ. ಅಥವಾ ಈ ನಂಬರ್ 9972251800 ಗೆ “ಹೈ” ಎಂದು ಟೈಪ್ ಮಾಡಿ ಕಳುಹಿಸಿ.
ಗೆದ್ದವರಿಗೆ ನಗದು ಬಹುಮಾನ, ಆಕರ್ಷಕ ಉಡುಗೊರೆ ಜೊತೆಗೆ ಜಿಲ್ಲೆಯ ಹೆಸರಾಂತ ಗಾಯಕರು, ನಟ ನಟಿಯರನ್ನ ಭೇಟಿ ಮಾಡುವ, ಮಾತನಾಡುವ ಅವಕಾಶವೂ ದೊರೆಯಲಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೆಪ್ಟೆಂಬರ್ 11 ಹಾಗು ಸೆಪ್ಟೆಂಬರ್ 18 ರಂದು ಆಡಿಷನ್ ನಡೆಯಲಿದೆ. ಸಂಗೀತ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಹಂಬಲ ನಿಮ್ಮಲ್ಲಿದ್ದರೆ, ಇಂದೇ ರಿಜಿಸ್ಟರ್ ಮಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.