HACK-TECH 2.0 ಸ್ಪರ್ಧೆಯಲ್ಲಿ ಎಸ್.ಎಂ.ವಿ.ಐ.ಟಿ ಕಾಲೇಜಿಗೆ ದ್ವಿತೀಯ ಸ್ಥಾನ

ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಮೂರನೇ ವರ್ಷದ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಗಣೇಶ ಕಾಮತ್, ಮಕ್ವಿನ್ ಹರ್ಶೆಲ್ ಡಿಸೋಜಾ, ದೇವೋನಾ ಥೆಲ್ಮಾ ಪಿಂಟೋ, ದಿನೇಶ್ ಶೆಟ್ಟಿ ಕೊಯಮತ್ತೂರಿನ ಶ್ರೀ ಕೃಷ್ಣ ಆರ್ಟ್ ಎಂಡ್ ಸೈನ್ಸ್ ಕಾಲೇಜು ಫೆ. 20 ರಿಂದ 24 ರ ವರೆಗೆ ಆಯೋಜಿಸಿದ್ದ “HACK-TECH 2.0” ಆನ್ ಲೈನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಈ ಎಲ್ಲ ವಿದ್ಯಾರ್ಥಿಗಳು ಗ್ಲುಕೋಮಾ ಪತ್ತೆ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಳವಡಿಸಿದ್ದು, ಆರೋಗ್ಯ ರಕ್ಷಣೆಯ ತಂತ್ರಜ್ಞಾನದಲ್ಲಿ ಅವರ ನಾವೀನ್ಯತೆ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದ್ದಾರೆ.

ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.